ಪ್ರತಿಭಟನೆ ತಾರಕಕ್ಕೇರಿತ್ತು. ಒಂದು ಕಡೆ ಒಂದು ಪಕ್ಷದ ದೊಡ್ಡ ಬಾವುಟವನ್ನು ಹಾರಿಸಿಕೊಂಡು ಈ ಕ್ರೀಡಾಂಗಣದ ಹೆಸರನ್ನು ಬದಲಾವಣೆ ಮಾಡಬಾರದು ಅಂತ ಘೋಷಣೆ ಕೂಗುತ್ತಾ ಇದ್ದರು, ಎದುರುಗಡೆ ನಿಂತವರು ಅವರ ಪಕ್ಷದ ಬಾವುಟವನ್ನು ಹಿಡಿದು ಈ ಸಲ ಕ್ರೀಡಾಂಗಣದ ಹೆಸರು ಬದಲಾಗಲೇಬೇಕು ಅಂತ ಪಟ್ಟು ಹಿಡಿದಿದ್ದರು. ಎರಡು ಹೋರಾಟಕ್ಕೆ ಜನವೂ ಸೇರಿದ್ದರು, ಅವರ ಎರಡು ಪ್ರತಿಭಟನೆಯ ವಿಚಾರಗಳು ಟಿವಿಯಲ್ಲಿ ಪತ್ರಿಕೆಗಳಲ್ಲಿ ಬಿತ್ತರವಾಗ್ತಾಯಿದ್ದವು. ಜನರು ಯಾವ ಹೆಸರು ಸೂಕ್ತ ಅನ್ನುವುದಕ್ಕೆ ಚರ್ಚೆ ವಾದ ಸಮ್ಮೇಳನಗಳನ್ನೇ ಆರಂಭ ಮಾಡಿದ್ರು ಕೂಡ. ಆದರೆ ಆ ಪ್ರತಿಭಟನೆಗೆ ಯಾವುದೇ ಕ್ರೀಡಾಪಟುಗಳು ಭಾಗವಹಿಸಿರಲಿಲ್ಲ. ದಿನ ಬೆಳಗ್ಗೆ ಐದು ಗಂಟೆಗೆ ಅಭ್ಯಾಸ ಮಾಡಲು ಮೈದಾನಕ್ಕಿಳಿದಾಗ ಓಡುವ ವೃತ್ತದಲ್ಲಿ ಕಲ್ಲು ಮುಳ್ಳುಗಳು ಕಾಲಿಗೆ ಚುಚ್ಚುತ್ತಿದ್ದವು, ಅಭ್ಯಾಸಕ್ಕೆ ಸೂಕ್ತವಾದ ಸಲಕರಣೆಗಳು ಸಿಗಲೇ ಇಲ್ಲ, ರಾಜ್ಯವನ್ನ ಪ್ರತಿನಿಧಿಸುವುದಕ್ಕೆ ಹೊರಟಾಗ ರೈಲಿನ ಶೌಚಾಲಯದ ಬಳಿ ಮಲಗಿ ಊರು ದಾಟಬೇಕಿತ್ತು, ಅಭ್ಯಾಸವನ್ನ ಹೇಳಿಕೊಡುವುದಕ್ಕೆ ದೈಹಿಕ ಶಿಕ್ಷಕರೇ ಸಿಗುತ್ತಾ ಇರಲಿಲ್ಲ, ಹೆಚ್ಚಿನವರು ತಮ್ಮ ಪ್ರತಿಭಾ ಪ್ರದರ್ಶನಕ್ಕೆ ತಾಲೂಕನ್ನೇ ಬದಲಾಯಿಸಿಕೊಂಡು ಬೇರೆ ರಾಜ್ಯವನ್ನೇ ಹುಡುಕಿ ಹೊರಟವರಿದ್ದರು. ಯಾರಿಗೂ ಮೈದಾನದೊಳಗಿನ ಕಷ್ಟ ಕಾಣಲೇ ಇಲ್ಲ ಯಾವ ಪತ್ರಿಕೆ ಮಾಧ್ಯಮದಲ್ಲೂ ಸುದ್ದಿ ಬಿತ್ತರವಾಗಲಿಲ್ಲ, ಕೊನೆಗೂ ಯಾವ ಹೆಸರು ತೀರ್ಮಾನವಾಗದೆ ಕೋರ್ಟಿನೊಳಗೆ ಕೇಸು ದಾಖಲಾಯಿತು. ಒಳಗಿನ ಕ್ರೀಡಾಳುಗಳ ಬೆವರ ಹನಿ ನೆಲಕ್ಕೆ ಬಿದ್ದು ನೆಲವು ಬೇಸರಿಸಿಕೊಂಡಿತು...
- ಧೀರಜ್ ಬೆಳ್ಳಾರೆ
ಚಿತ್ರ ಕೃಪೆ: ಇಂಟರ್ನೆಟ್ ತಾಣ
ಪ್ರತಿಕ್ರಿಯೆ (0)
ಇನ್ನೂ ಯಾವುದೇ ಪ್ರತಿಕ್ರಿಯೆಗಳಿಲ್ಲ. ಮೊದಲ ಪ್ರತಿಕ್ರಿಯೆ ಮಾಡಿ!