ಸಿಟ್ಟಿನ ಕೈಗೆ ಬುದ್ಧಿಯನ್ನು ದಾಟಿಸಿ ಬಿಟ್ಟಿದ್ದರು ಅಪ್ಪ. ಅಡುಗೆ ಕೋಣೆಯಲ್ಲಿದ್ದ ಹೆಂಡತಿ ಆ ದಿನ ಹೊರಡಬೇಕಿದ್ದ ಕಾರ್ಯಕ್ರಮಕ್ಕೆ ಇನ್ನೂ ತಯಾರಾಗಿರಲಿಲ್ಲ ಮತ್ತೆ ಮತ್ತೆ ಕೇಳುವಾಗಲು ಮನೆ ಕೆಲಸ ಮುಗಿಸಿ ಹೊರಡುವ ತರಾತುರಿಯಲ್ಲೇ ಅವರಿದ್ರು. ಅಪ್ಪನಿಗೆ ಸಿಟ್ಟು ಯಾಕೋ ನೆತ್ತಿಗೇರಿ ಬಿಟ್ಟಿತ್ತು ಅಮ್ಮನ ತಲೆಗೆ ಜೋರಾಗಿ ಹೊಡೆದು ಬಿಟ್ಟರು. ಅಮ್ಮನು ವಾದ ಮಾಡುವುದಕ್ಕೆ ಶುರುಮಾಡಿದರು, ಇಬ್ಬರ ನಡುವೆ ಮಾತು ಸುರುಳಿ ಸುತ್ತಿಕೊಂಡು ಓಡಾಡಲಾರಂಭಿಸಿತು. ಆ ಮಾತುಗಳ ಮಧ್ಯೆ ಇಬ್ಬರು ತಯಾರಾಗಿ ಕಾರ್ಯಕ್ರಮಕ್ಕೆ ತೆರಳಿದ್ರು ವೇದಿಕೆಯ ಮೇಲೆ ಆದರ್ಶ ದಂಪತಿ ಸ್ಪರ್ಧೆಗೆ ಇವರ ಭಾಗವಹಿಸುವಿಕೆ ಅನಿವಾರ್ಯವಾಗಿತ್ತು. ವೇದಿಕೆಯ ಮೆಟ್ಟಿಲೇರುವವರೆಗೂ ಮನೆಯ ವಿಚಾರದ ಸಣ್ಣ ಕಿಡಿ ಆಗಾಗ ಆಗಾಗ ಹೊಗೆಯುಗಳುತ್ತಿತ್ತು. ಒಮ್ಮೆ ವೇದಿಕೆಗೇರಿದ ತಕ್ಷಣ ಅದು ಎಲ್ಲಿತ್ತೋ ಪ್ರೀತಿ ಇಬ್ಬರನ್ನು ಆವರಿಸಿಕೊಂಡು ಬಿಟ್ಟಿತು. ಒಬ್ಬರನ್ನೊಬ್ಬರು ಬಿಟ್ಟು ಕೊಡದೆ ಅದ್ಭುತವಾಗಿ ವೇದಿಕೆಯಲ್ಲಿ ರಂಜಿಸಿದರು ಮಾತನಾಡಿದರು ವಿಷಯವನ್ನು ಹಂಚಿಕೊಂಡರು ಇವರ ಅನ್ಯೋನ್ಯತೆಗೆ ಈ ಪ್ರೀತಿಯ ಬಾಂಧವ್ಯಕ್ಕೆ ಗೆಲುವಿನ ಕಿರೀಟವು ಕೈಗೆ ಸಿಕ್ಕಿತು. ಅದೇ ಕಿರೀಟವನ್ನು ಹೊತ್ತು ಖುಷಿಯಿಂದ ಮನೆ ಒಳಗೆ ಪ್ರವೇಶವಾಯಿತು. ಆಗಾಗ ಬಹುಮಾನದ ಫಲಕ ಇವರನ್ನು ನೋಡಿ ಬದುಕಿಗೆ ಇನ್ನೊಂದುಷ್ಟು ಉತ್ಸಾಹವನ್ನು ತುಂಬಿಸುತ್ತದೆ, ಈಗಲೂ ಅಷ್ಟೇ ಪ್ರೀತಿಸುತ್ತಾರೆ ಅಲ್ಲ ಅದಕ್ಕಿಂತ ಹೆಚ್ಚು ಪ್ರೀತಿಸುತ್ತಾರೆ ಬದುಕನ್ನ ಸಂಭ್ರಮಿಸುತ್ತಾರೆ.

- ಧೀರಜ್ ಬೆಳ್ಳಾರೆ                                  

ಚಿತ್ರ ಕೃಪೆ: ಇಂಟರ್ನೆಟ್ ತಾಣ