ಇದ್ಯಾಕೆ‌ ಹೀಗೆ... ನಾನು ಮನೆ ಮುಂದೆ ಚಂದದ ತುಳಸಿ ಕಟ್ಟೆ ಕಟ್ಟಿದ್ದೇನೆ. ಅದರ ಸುತ್ತ ಮಾರ್ಬಲ್ ಹಾಕಿದ್ದೇನೆ, ಚಂದದ ಬಣ್ಣ ಹಚ್ಚಿದ್ದೇನೆ, ತುಂಬಾ ದುಡ್ಡು ಕೊಟ್ಟು ಆ ಸ್ಥಳವನ್ನ ತಯಾರು ಮಾಡಿದ್ದೇನೆ, ಮನೆಯ ಮುಂದೆನೇ ಅದನ್ನ ಸ್ಥಾಪಿಸಿದ್ದೇನೆ, ಆದರೂ ಆ ತುಳಸಿ ಗಿಡ ಸೊಂಪಾಗಿ ಬೆಳೆದಿಲ್ಲ, ಯಾಕೆ? 

ಓ‌ ತುಳಸಿ ಗಿಡವೇ ನನ್ನ ಮೇಲೆ‌ ಯಾಕೆ ಬೇಸರ, ಯಾಕೆ‌ ನನ್ನ ಮನೆ ಮುಂದೆ ಸೊಂಪಾಗಿ ಬೆಳೆದಿಲ್ಲ,  

ಅಲ್ಲೋ ಮಾರಾಯ ನೀನು ಕಟ್ಟಿದ ಕಟ್ಟೆಯ ಸೌಂದರ್ಯದಿಂದ ನಾನು ಸೊಂಪಾಗಿ ಬೆಳೆಯೋದ್ದಕ್ಕೆ ಆಗೋದಿಲ್ಲ, ಪ್ರತೀ ದಿನ ನೀರು ಹಾಕಬೇಕು, ಸುತ್ತ ಸ್ವಚ್ಛಗೊಳಿಸಬೇಕು, ಒಣಗಿದ ಕಡ್ಡಿಗಳ ಕತ್ತರಿಸಬೇಕು, ಪ್ರತೀ ದಿನವೂ ಬಂದು ಕಷ್ಟ ಸುಖ ವಿಚಾರಿಸಬೇಕು, ಇದ್ಯಾವುದು ಮಾಡದೇ ನೀನು ಬಯಸೋದು ತಪ್ಪು. ಇದು ತುಳಸಿ ಗಿಡ ಮತ್ತು ನನ್ನ ಮಾತುಕತೆ ಆದರೆ ಪರೋಕ್ಷವಾಗಿ ಬದುಕಿಗೂ ಒಪ್ಪಿತವಾಗಿದೆ

- ಧೀರಜ್ ಬೆಳ್ಳಾರೆ                                  

ಚಿತ್ರ ಕೃಪೆ: ಇಂಟರ್ನೆಟ್ ತಾಣ