ಅವನು ಊರಿನ ಬಗ್ಗೆ ಸತತವಾಗಿ ಚಿಂತೆ ಮಾಡುತ್ತಿದ್ದ, ಊರಿನಲ್ಲಿ ತನ್ನ ಸುತ್ತ ಮುತ್ತ ಯಾರೂ ಬೇಸರಿಸದೇ ಸಂತೋಷವಾಗಿರಬೇಕು ಅದಕ್ಕಾಗಿ ಪ್ರಯತ್ನ‌ ಪಡ್ತಾನೆ ಇದ್ದ. ಯಾರಾದರೂ ನೋವಲ್ಲಿದ್ದರೆ ತಾನೇ ಹೋಗಿ ವಿಚಾರಿಸಿ ಅವರ ಬದುಕಿಗೆ ಒಂದಷ್ಟು ಬೆಳಕು ಸಾಂತ್ವಾನ ನೀಡುವ ಕೆಲಸ ಮಾಡುತ್ತಿದ್ದ. ದಿನಾ ಹೀಗೆ ಮುಂದುವರೆದಿತ್ತು. ಅವತ್ತು ಅವನ ಮನಸ್ಸು ಅವನನ್ನ ಹಿಡಿದು ನಿಲ್ಲಿಸಿತ್ತು ಓ ಮಾರಾಯ ಒಮ್ಮೆ ನಿಲ್ಲು ಏಕೆ ಓಡುತ್ತಿದ್ದೀಯಾ? ಒಮ್ಮೆ ನನ್ನ ಮಾತು ಕೇಳೋ ಮಾರಾಯಾ? ಊರಿನ ಬಗ್ಗೆ ಚಿಂತೆ ಒಳ್ಳೆಯದು ಆದರೆ ನನ್ನ ಜೊತೆ ಮಾತನಾಡೋ ನಾನು ನಿನ್ನವನಲ್ಲವೇ? ಒಂದು ದಿನವಾದರೂ ನಾನು ನಿನಗೆ ಕಂಡಿಲ್ಲವೇ? ಮಾತಾಡೋಕೆ ತುಂಬಾ ಇದೆ. ನಿನ್ನ ಬದುಕು ಇನ್ನೂ ಎತ್ತರಕ್ಕೇರಲು ನನ್ನ ಜೊತೆ ಮಾತಾನಾಡೋ ನಾನು ನಿನಗೆ ದಾರಿ ತೋರಿಸ್ತೇನೆ ಊರವರಿಗಿಂತ ಮೊದಲು ನಾನು ಇದು ನಿನಪಿರಲಿ. ಎಚ್ಚರವಾಗೋ… ಅವನಿಗೆ ಮಾತೇ ಕೇಳುತ್ತಿಲ್ಲ.

- ಧೀರಜ್ ಬೆಳ್ಳಾರೆ                                  

ಚಿತ್ರ ಕೃಪೆ: ಇಂಟರ್ನೆಟ್ ತಾಣ