ಜೋಲಿ ಹೊಡಿತಾ ಹೊಂಟೆವ್ನಿ ಹೊರಗ ಕುಡುಕನೆಂದು  ತಿಳಿಬ್ಯಾಡ

ಜಾಲಿ ಮಾಡ್ತಾ ತಿರಿಗಿವ್ನಿ ಊರೊಳ್ಗಾ ಕೆಡುಕನೆಂದು ತಿಳಿಬ್ಯಾಡ

 

ಹೇಳೋದು ಮಸ್ತ್ ಐತೆ ಸಾಮೀ ಕೇಳೋರ್ ಯಾರ್ ಇದ್ದಾರ

ಮಾತು ಮಾತಿಗ್ ಸಿಡ್ಕ್ತಾನ ಮನುಸಾ ಸಿಡುಕನೆಂದು  ತಿಳಿಬ್ಯಾಡ

 

ಹೊಟ್ಟೆ ಮ್ಯಾಲೆ ಹೊಡೆಯೋನು ಯಾರಿದ್ದಾರ್ರೀ ಊರೊಳಗ

ಕಟ್ಟೆಮ್ಯಾಲಿದ್ದು ಬೊಗಳೆ ಬಿಡೋನ್ನಾ ಹಿಡುಕನೆಂದು ತಿಳಿಬ್ಯಾಡ

 

ದರಿದ್ರ ಸಂಪತ್ತು ಹೋದ್ರೆ ಹೋಗ್ಲಿ ಯಾರಿಗೆ ಬೇಕ್ರಿ ಹೇಳ್ರಪ್ಪಾ

ಅಪ್ಪಂಗೇ ಮಗ ವಂಚನೆ ಮಾಡ್ದಾ ಕಟುಕನೆಂದು ತಿಳಿಬ್ಯಾಡ

 

ಸಮಾಜ್ದಾಗ ಮಳ್ಳಾ ಹೊಂಟಾನ ಅನ್ ಬ್ಯಾಡ ಈಶಾ 

ಹೆತ್ತವ್ವಂಗೆ ಹೆಗ್ಗಣ ಮುದ್ದು ಕುಟುಕನೆಂದು ತಿಳಿಬ್ಯಾಡ

 

-ಹಾ ಮ ಸತೀಶ ಬೆಂಗಳೂರು

ಚಿತ್ರ ಕೃಪೆ: ಇಂಟರ್ನೆಟ್ ತಾಣ