ಪ್ರೀತಿ ಇರಲಿ ಸಾವ ತನಕ ನಿನ್ನ ಜೊತೆಯಲಿ ಸಖ
ಮೌನ ತೊಡೆದು ಕೈಯ ಹಿಡಿಯು ನಿನ್ನ ನುಡಿಯಲಿ ಸಖ
ಬಾನ ಚಂದ್ರ ತಾರೆ ಸಂಗ,ನೋವು ಯಾಕೆ ಬಾನಿಗೆ
ಚೆಲುವು ಇರಲು ಸೋಲು ಇಹುದೆ, ನಿನ್ನ ಬಳಿಯಲಿ ಸಖ
ಬೆಂಕಿಯಂತ ಮಾತಿನೊಳಗೆ,ಮನವು ಸುಡದೆ ಇದ್ದೀತೆ
ಹಸಿವು ಇರುವ ಪ್ರೀತಿ ಮಾತು, ನಿನ್ನ ಬೆರೆಯಲಿ ಸಖ
ಹಿರಿಯರಂತೆ ಕಿರಿಯರಿರಲಿ, ಬದುಕು ಸ್ವರ್ಗದಂತೆ
ಫಲದ ಬಯಕೆ ಚಿಗುರುತಿರಲಿ, ನಿನ್ನ ಮನೆಯಲಿ ಸಖ
ಕಹಿಯ ಮಾತು ಹೂತು ಹೋಗೆ,ಸವಿಯು ಬರಲಿ ಈಶ
ಸೊರಗದಿರಲಿ ಒಲವು ಸಿರಿಯು ನಿನ್ನ ಜೊತೆಯಲಿ ಸಖ
-ಹಾ. ಮ ಸತೀಶ ಬೆಂಗಳೂರು
ಚಿತ್ರ ಕೃಪೆ: ಇಂಟರ್ನೆಟ್ ತಾಣ
ಪ್ರತಿಕ್ರಿಯೆ (0)
ಇನ್ನೂ ಯಾವುದೇ ಪ್ರತಿಕ್ರಿಯೆಗಳಿಲ್ಲ. ಮೊದಲ ಪ್ರತಿಕ್ರಿಯೆ ಮಾಡಿ!