ಮನದಾಳದಿಂದ ಪ್ರೀತಿಸಿದೆನೊ

ಇಂದು ನಿನ್ನನ್ನು ಎಂದೆಂದಿಗು

ಒಲವಿಂದ ಬಳಿಬಂದೆ ಓ ಸುಂದರಿ

ಕೈಹಿಡಿದು ನನ್ನಲ್ಲಿ ಒಂದಾಗು

 

ಬಾನ ಚಂದಿರನಂತೆ ಕಾಯುತಿಹೆನೊ

ತಾರೆಯಾಗಿ ನೀನಿಂದು ಬರುವೆಯಾ

ಹಗಲೆಲ್ಲವೂ ರಾತ್ರಿಯಾಗಿಹುದೊ

ಪ್ರೀತಿಯ ಮಳೆಯನ್ನು ಸುರಿಸಲಾರೆಯಾ

 

ಹುಸಿಯ ಮಾತೇ ಇಂದು ಮತ್ತಾಯಿತೇನೊ

ಮುತ್ತಿಡಲು ಅಲ್ಲಿ  ನೀನಿಲ್ಲವೇನೊ

ಈ ಬದುಕೀಗ ಬದುಕಲ್ಲವೇನೊ

ಶಾಂತಿಯ ಗೋರಿಯೊಳಗೆ ಸೇರಿದೆನೊ

 

-ಹಾ. ಮ ಸತೀಶ ಬೆಂಗಳೂರು

ಚಿತ್ರ ಕೃಪೆ: ಇಂಟರ್ನೆಟ್ ತಾಣ