ಅವನು ಬೀದಿಬೀದಿ ಓಡುತ್ತಿದ್ದಾನೆ. ಊರೂರು ಅಲೆಯುತ್ತಿದ್ದಾನೆ ಕಂಡವರ ಮುಂದೆ ಕೈಚಾಚಿ ಬೇಡುತ್ತಿದ್ದಾನೆ, ಯಾರಾದರೂ ಒಂದು ಹೊತ್ತು ಊಟ ಕೊಡಿ ಅಂತ. ಆದರೆ ಯಾರೂ ಕೂಡ ಅವನ ಕಡೆಗೆ ಗಮನ ಹರಿಸುತ್ತಿಲ್ಲ. ಅವನನ್ನ ತಿರಸ್ಕರಿಸಿ ದೂರ ತಳ್ಳುವವರೆ ಹೆಚ್ಚು. ಒಂದು ಕಾಲದಲ್ಲಿ ಅವನ ಬಳಿ ಶ್ರೀಮಂತಿಕೆ ಇದ್ದಾಗ ದುಡ್ಡು ಓಡಾಡುತ್ತಿದ್ದಾಗ ಎಲ್ಲರೂ ಆತ್ಮೀಯ ಬಾಂಧವ್ಯವನ್ನು ರಚಿಸಿಕೊಂಡಿದ್ದರು. ಎಲ್ಲರೂ ಅದ್ಭುತ ಸಂಬಂಧಗಳನ್ನ ಸೃಷ್ಟಿಸಿಕೊಂಡಿದ್ದರು. ಆದರೆ ಅವನು ಬೀದಿ ಬಿಕಾರಿಯಾದಾಗ ಯಾವ ಬಾಂಧವ್ಯವು ಕೈಹಿಡಿಲೇ ಇಲ್ಲ. ಅವನಿಗೆ ಗೊತ್ತಿದೆ ಈಗ ನನ್ನ ಕಷ್ಟವನ್ನ ನೋಡುವವರಿಲ್ಲ ನಾನು ಹಸಿವಿನಿಂದಲೇ ನರಳಿ ನರಳಿ ಸಾಯ್ತೇನೆ. ನನ್ನ ವೈಕುಂಠ ಸಮಾರಾಧನೆಯನ್ನು ಅದ್ಭುತವಾಗಿ ಮಾಡುವುದಕ್ಕಂತಲೇ ಕುಟುಂಬದವರೆಲ್ಲರೂ ತಯಾರಾಗಿದ್ದಾರೆ ಅವತ್ತು ಅದ್ಭುತವಾದ ರುಚಿಯಾದ ಭೋಜನವನ್ನೇ ಮಾಡಿ ಎಲ್ಲರೂ ತಿಂದುಂಡು ಸಂಭ್ರಮ ಪಡುತ್ತಾರೆ. ಆದರೆ ನನ್ನ ಹಸಿವಿನ ದಿನ ನೀಡುವುದಕ್ಕೆ ಯಾರ ಕೈಯೂ ಮುಂದೆ ಬರುವುದಿಲ್ಲ. ಬದುಕೆಷ್ಟು ವಿಚಿತ್ರ ಅಂತ ಅಂದುಕೊಂಡು ಅನ್ನಕ್ಕಾಗಿ ಹುಡುಕಾಟ ಮುಂದುವರೆಸಿದ.

- ಧೀರಜ್ ಬೆಳ್ಳಾರೆ                                  

ಚಿತ್ರ ಕೃಪೆ: ಇಂಟರ್ನೆಟ್ ತಾಣ