ರಸ್ತೆಯಲ್ಲಿ ಓಡುತ್ತಿದ್ದಾನೆ, ಜನರ ಸಂಚಾರವನ್ನು ನಿಯಂತ್ರಿಸುತ್ತಾ ವಹಿಸಿದ ಕಾರ್ಯವು ಸರಿಯಾಗಿ ನಡಿಬೇಕು ಅನ್ನುವ ಕಾರಣಕ್ಕೆ ಓಡುತ್ತಿದ್ದಾನೆ, ಬೆವರು ಇಳಿತಾ ಇದೆ ಎಷ್ಟು ದೂರ ಓಡಿದರೂ ಕೊನೆ ಅನ್ನೋದು ಸಿಕ್ತಾ ಇಲ್ಲ. ಪೊಲೀಸ್ ಹುದ್ದೆಗೆ ಸೇರುವುದಕ್ಕಾಗುವಾಗ ಅವರು ಹೇಳಿದ ದೂರವನ್ನ ಕೆಲವು ನಿಮಿಷಗಳ ಒಳಗೆ ತಲುಪಿದ್ದ. ಆದರೆ ಈಗ ತಲುಪಬೇಕಾದ ದೂರಕ್ಕೆ ಸರಿಯಾದ ಸಮಯವಿಲ್ಲ. ಓಡುತ್ತಿದ್ದಾನೆ, ಸುತ್ತಮುತ್ತ ಜನ ನಿಂತು ಗಮನಿಸುತ್ತಿದ್ದಾರೆ ಇವನನ್ನಲ್ಲ ಇವನ ಹಿಂದಿರುವ ಗಾಡಿಯ ಮೇಲೆ ನಿಂತ ವ್ಯಕ್ತಿಯನ್ನು. ಆತನದ್ದು ಏನು ಅದ್ಭುತ ಸಾಧನೆ ಅಲ್ಲ ಕಾರ್ಯಕ್ರಮ ಒಂದರಲ್ಲಿ ವಿಜಯಗಳಿಸಿದ್ದ. ಆತನ ಮೆರವಣಿಗೆಗೆ ಅಭಿಮಾನಿಗಳು ಕಾರ್ಯಕ್ರಮ ಆಯೋಜಿಸಿದ್ರು. ಎಲ್ಲವೂ ಸರಿ ಆದರೆ ಇಷ್ಟು ವರ್ಷ ಶಿಕ್ಷಣ ಪಡೆದು ಪರೀಕ್ಷೆ ಯಲ್ಲಿ ಉತ್ತಮ ಅಂಕ ಗಳಿಸಿ ಸರಕಾರಿ ಹುದ್ದೆಯೊಂದನ್ನು ಪಡೆದು ಇದೀಗ ಕಾವಲಿಗಾಗಿ ರಸ್ತೆಯಲ್ಲಿ ಓಡುವ ಪರಿಸ್ಥಿತಿ ಬಂದುದಕ್ಕೆ ಕಣ್ಣೀರಿಡುತ್ತಾ ಓಡುತ್ತಿದ್ದಾನೆ. ಯಾಕೆಂದರೆ ಅದು ಆತನಿಗೆ ವಹಿಸಿದ್ದ ಕೆಲಸ ಮತ್ತು ನಿಭಾಯಿಸಬೇಕಾದ ಜವಾಬ್ದಾರಿ ನೋಡುವ ಕಣ್ಣುಗಳು ಆತನ ಸುಸ್ತು ಅದ್ಯಾವುದೂ ಗಮನಕ್ಕೆ ಯಾರಿಗೂ ಬರಲೇ ಇಲ್ಲ...

- ಧೀರಜ್ ಬೆಳ್ಳಾರೆ                                  

ಚಿತ್ರ ಕೃಪೆ: ಇಂಟರ್ನೆಟ್ ತಾಣ