ಅಪ್ಪ ಅಮ್ಮ ಸುಮ್ನಿರಿ ನಿಮಗಿದು ಅರ್ಥವಾಗಲ್ಲ, ನೀವಂತೂ ಓದಿಕೊಂಡಿಲ್ಲ ಹಾಗಾಗಿ ನಿಮಗಿದೂ ಅರ್ಥವಾಗೋದಿಲ್ಲ. ಮತ್ಯಾಕೆ ಒತ್ತಾಯ ಮಾಡ್ತಾ ಇದ್ದೀರಿ? ರಂಜಿತ್ ಮತ್ತಷ್ಟು ಜೋರಾಗಿ ಏರು ಸ್ವರದಲ್ಲಿ ಅಪ್ಪ ಅಮ್ಮನನ್ನ ಗದರಿಸಿ ಮನೆಯಿಂದ ಹೊರನಡೆದಿದ್ದ, ಇಬ್ಬರೂ ಮೌನವಾದರೂ ರಂಜಿತ್ ಸಣ್ಣವನಿರುವಾಗ ತೊದಲು ನುಡಿಯಲ್ಲಿ ಆಡಿದ ಎಲ್ಲ ಮಾತುಗಳನ್ನ ಇವರು ಅರ್ಥಮಾಡಿಕೊಂಡಿದ್ದರೂ, ಅರ್ಥವಾಗದಿದ್ದರೂ ಅರ್ಥೈಸಿಕೊಂಡು ಬೆಳೆಸಿದ್ವಿ... ಇವತ್ತೂ...ಕಣ್ಣೀರು ಯಾಕೋ ಹೊರಗೆ ಬಂದು ಇಣುಕಿತು.
- ಧೀರಜ್ ಬೆಳ್ಳಾರೆ
ಚಿತ್ರ ಕೃಪೆ: ಇಂಟರ್ನೆಟ್ ತಾಣ
ಪ್ರತಿಕ್ರಿಯೆ (0)
ಇನ್ನೂ ಯಾವುದೇ ಪ್ರತಿಕ್ರಿಯೆಗಳಿಲ್ಲ. ಮೊದಲ ಪ್ರತಿಕ್ರಿಯೆ ಮಾಡಿ!