ಅಲ್ಲೆಲ್ಲೋ ನಿಂತು ನನ್ನನ್ನು ಇಂದು ಕರೆಯುತಿರುವೆಯಾ ನಲ್ಲೆ

ಮನೆಯಾಚೆ ಇದ್ದು ಕಣ್ಣ ನೀರನಿಂದು ಹರಿಸುತಿರುವೆಯಾ ನಲ್ಲೆ

 

ಏರಿರುವ ಭಾಸ್ಕರ ಪಡುವಣದಿ ಇಳಿಯಲೇ ಬೇಕಲ್ಲ ಯಾಕೆ

ಉನ್ಮಾದ ಬೆಂಕಿಯು ಹೊತ್ತಿ ಉರಿದಾಗ ಕುಣಿಸುತಿರುವೆಯಾ ನಲ್ಲೆ

 

ಮುನಿಯಂತೆ ಹೀಗೆ ತಪಸ್ಸಲ್ಲೇ ಇರಲೆ ನೀಹೇಳೆ ನನ್ನ ಚೆಲುವೆ

ಜೀವನದ ನೋಟ ಕಣ್ಣೆದುರೇ ನೋಡಿ ಚಲಿಸುತಿರುವೆಯಾ ನಲ್ಲೆ

 

ಪ್ರೀತಿಸುವ ನೋವ ತಿಳಿಯದೆಯೆ ಹೂವು ಬಾಡಿ ಹೋಯಿತೇನು

ಬಾರದಿಹ ಬೆಳಕ ಕಾಣಲೋ ನೀನು ಇಣುಕುತಿರುವೆಯಾ ನಲ್ಲೆ

 

ಕಾಣಿಸದಾ ತನುವ ಬಳಸುವ ಬಯಕೆಯಲಿ ಸೋತನೇನು ಈಶ

ಪ್ರಿಯಕರನ ನೆನೆದು ದೂರದೇ ಕುಳಿತು ಬಳಲುತಿರುವೆಯಾ ನಲ್ಲೆ

 

-ಹಾ .ಮ ಸತೀಶ ಬೆಂಗಳೂರು

ಚಿತ್ರ ಕೃಪೆ: ಇಂಟರ್ನೆಟ್ ತಾಣ