ಎಲ್ಲೊ ಇದ್ದವನ ಮತ್ಯಾಕೆ ಇಂದು ಕರೆಯುತ್ತಿರುವೆ ಸುಂದರಿ
ಸತ್ತೆ ಹೋದವನಿವ ಎಂದವನ ಸೆಳೆಯುತ್ತಿರುವೆ ಸುಂದರಿ
ಅಲ್ಲೆಲ್ಲೋ ವಾಸವಾಗಿದ್ದೆ ಮತ್ತೆಳೆದು ತಂದು ಕೂರಿಸಿದೆಯೇಕೆ
ಸುಡುವಾಗ್ನಿಯ ನಡುವೆಯೇ ದಿನ ಕಳೆಯುತ್ತಿರುವೆ ಸುಂದರಿ
ಉಪ್ಪರಿಗೆಯ ಮೇಲಿಂದ ತಳ್ಳಿದ ನಿನಗೆ ಇಷ್ಟೊಂದು ಪ್ರೀತಿಯೆ
ಪರಿಮಳವಿಲ್ಲದ ಕತ್ತೂರಿಯ ನೀನು ಹಿಡಿಯುತ್ತಿರುವೆ ಸುಂದರಿ
ಚಿನ್ನದ ಮೇನೆಯಲ್ಲಿ ಕುಳಿತ ತನುವಿನಲ್ಲಿ ಆಸೆಯೊಂದು ಚಿಗುರಿತೊ
ಬೆಳ್ಳಿಯ ಹೊಳಪಂತೆ ನಾನಿಲ್ಲವಾದರೂ ಬಯಸುತ್ತಿರುವೆ ಸುಂದರಿ
ಗೂಡುಗಳೊಳಗೇ ಬದುಕಿಂದು ಕೊನೆಯಾಗುವ ತವಕದಲ್ಲಿದೆ ಈಶಾ
ಚಿಂತೆಯಿಲ್ಲದ ನಿನ್ನೊಳಗೆ ಕಾಣದ ಬಂಡಿಯ ಓಡಿಸುತ್ತಿರುವೆ ಸುಂದರಿ
-ಹಾ ಮ ಸತೀಶ ಬೆಂಗಳೂರು
ಚಿತ್ರ ಕೃಪೆ: ಇಂಟರ್ನೆಟ್ ತಾಣ
ಪ್ರತಿಕ್ರಿಯೆ (0)
ಇನ್ನೂ ಯಾವುದೇ ಪ್ರತಿಕ್ರಿಯೆಗಳಿಲ್ಲ. ಮೊದಲ ಪ್ರತಿಕ್ರಿಯೆ ಮಾಡಿ!