ತಪ್ಪು ತೋರಿಸಬೇಡವೊ ಮನುಜನೆ ನಿನ್ನೊಳಗೇ ಇರಬಹುದು ನೋಡು

ಕಪ್ಪು ಅವನೆಂದು ಜರಿಯದಿರು ಮನದೊಳಗೇ ಕಾಣಬಹುದು ನೋಡು

 

ಬೆಪ್ಪನಂತೆ ಆಗುವೆಯೋ ಹೀಗೆಯೇ ಇತರರನ್ನು ಬೈಯುತ್ತಾ ಹೋದರೆ

ಕಪ್ಪೆಯಂತೆ ಜಿಗಿಯುತಿರೆ ನೀನಿಂದು ಅವಸರದಿ ಓಡಬಹುದು ನೋಡು

 

ಯಾರನ್ನೂ ದೂರದಿರು ಮನೆಯೊಳಗೆ ಹತ್ತಿರದಿ ಕೈಹಿಡಿಯುವವರ ಕಾಣು

ನೀನೇನು ಮಾಡಿದರು ಅದುವೇ ಹೃದಯವನ್ನು ನುಂಗಬಹುದು ನೋಡು

 

ಬೇರೊಬ್ಬರ ಬದುಕಿಗೆ ವಿಷವುಣಿಸುತ್ತ ಬೆಳಕ ದಾರಿಯಲ್ಲಿ ಸಾಗುವಿಯೇನು

ಮನದುಬ್ಬರ ದೌರ್ಬಲ್ಯವೇ ಕೊನೆಗೊಮ್ಮೆ ಬಾಳನ್ನೇ ಹಿಂಡಬಹುದು ನೋಡು

 

ಗೆಜ್ಜೆಗಳ ದನಿಗಳಿಗೆ ಬಳಿಯದಿರು ಬಣ್ಣವನು ಉಸಿರದುವೇ ಅಡಗೀತು ಈಶಾ

ಹಜ್ಜೆಗಳ ಪಿಸುಮಾತಿಗೆ  ತಲೆಬಾಗಿದರೆ ರಶ್ಮಿಯದು ಮೂಡಬಹುದು ನೋಡು

 

-ಹಾ ಮ ಸತೀಶ ಬೆಂಗಳೂರು

ಚಿತ್ರ ಕೃಪೆ: ಇಂಟರ್ನೆಟ್ ತಾಣ