ಮುನಿಸು ಕಳೆದು ಮಾತು ನೆಗೆಯಲಿ ಗೆಳತಿ
ಕನಸು ಒಡೆದು ನನಸು ಹೊಳೆಯಲಿ ಗೆಳತಿ
ಚೆಲುವು ಅರಳಿ ರಶ್ಮಿ ಸುರಿಯದೆ ಹಾಡಿತೆ
ಒಲವು ಚಿಗುರಿ ಪ್ರೀತಿ ಕರೆಯಲಿ ಗೆಳತಿ
ಸವಿಯ ಸುಖದಿ ಚಿತ್ತ ಕುಣಿಯುತ ಸಾಗಿದೆ
ನಲಿವ ಹೊಂದುತ ಬಾಳು ಸೆಳೆಯಲಿ ಗೆಳತಿ
ಖುಷಿಯ ಸುಖದಿ ಪ್ರೇಮ ಅರಳುತ ಬೆಳೆದಿದೆ
ದೆಸೆಯು ಬರುತ ಮೋಹ ಬೆಸೆಯಲಿ ಗೆಳತಿ
ಮನದಿ ರಣಿತ ಬೆಳಗುತ ನಡೆದನೆ ಈಶಾ
ವರದಿಯ ಪಾಠವು ಕಣ್ಣ ಬೆರೆಯಲಿ ಗೆಳತಿ
-ಹಾ ಮ ಸತೀಶ ಬೆಂಗಳೂರು
ಚಿತ್ರ ಕೃಪೆ: ಇಂಟರ್ನೆಟ್ ತಾಣ
ಪ್ರತಿಕ್ರಿಯೆ (0)
ಇನ್ನೂ ಯಾವುದೇ ಪ್ರತಿಕ್ರಿಯೆಗಳಿಲ್ಲ. ಮೊದಲ ಪ್ರತಿಕ್ರಿಯೆ ಮಾಡಿ!