ನಮ್ಮೂರಿನ ಕಟಪಾಡಿಯ ಮೂರನೇ ತಿರುವಿನಲ್ಲಿ ಹೊಸತೊಂದು ಶಾಲೆಯನ್ನು ಕಟ್ಟಿದ್ದಾರೆ. ಆ ಶಾಲೆಗೆ ಸೇರುವುದಕ್ಕೆ ಪ್ರತಿಯೊಬ್ಬರಿಗೂ ಅವಕಾಶಗಳಿವೆ. ಅಲ್ಲಿ ಯಾವುದೇ ವಯಸ್ಸಿನ ಹಂಗಿಲ್ಲ ಗಂಡು ಹೆಣ್ಣು ಬೇಧವಿಲ್ಲ. ಯಾರು ಬೇಕಾದರೂ ಸೇರಿಕೊಳ್ಳಬಹುದು. ಈ ಶಾಲೆಯಲ್ಲಿ ಕಲಿಯುವುದಕ್ಕೆ ಯಾವುದೇ ರೀತಿಯ ಹಣವನ್ನು ಕೂಡ ನೀಡಬೇಕಾಗಿಲ್ಲ. ಈ ಶಾಲೆಯಲ್ಲಿ ಕಲಿಸುವುದೇನೆಂದರೆ ಸೋಲಿನ ಜೊತೆ ಬದುಕೋದು ಹೇಗೆ ? ಇಲ್ಲಿ ಪ್ರತಿದಿನವೂ ಸೋಲನ್ನ ಕಲಿಸಲಾಗುತ್ತದೆ. ಆ ಸೋಲಿನೊಂದಿಗೆ ಬದುಕಿನ ಕ್ಷಣವನ್ನು ಆನಂದಿಸುವುದನ್ನ ತಿಳಿಸಲಾಗುತ್ತೆ. ಜೀವನದಲ್ಲಿ ಹಲವು ರೀತಿಯಲ್ಲಿ ಸೋತವರು ಇಲ್ಲಿ ವಿದ್ಯಾರ್ಥಿಗಳಿಗೆ ಮಾಹಿತಿಯನ್ನು ನೀಡುತ್ತಾರೆ. ಪ್ರತಿಯೊಬ್ಬರಿಂದ ಮಾಹಿತಿ ಪಡೆದುಕೊಂಡು ಗೆಲುವಿನ ದಾರಿಯನ್ನು ಹುಡುಕಿಕೊಳ್ಳಬಹುದು. ಅಲ್ಲಿ ಯಾರೂ ಕೂಡ ಗೆಲುವಿನ ಬಗ್ಗೆ ಯಾವುದೇ ರೀತಿಯಲ್ಲಿ ಮಾತನಾಡುವುದಿಲ್ಲ. ವ್ಯಕ್ತಿ ಸೋಲನ್ನ ಕಲಿತಾಗ ಮಾತ್ರ ಗೆಲುವನ್ನ ಆನಂದಿಸಬಹುದು ಅನ್ನೋದು ಅವರ ನಂಬಿಕೆ ಬೇಕು . ನಿಮಗೂ ಸೇರಬೇಕು ಅಂತಿದ್ರೆ ತಿಳಿಸಿ.

- ಧೀರಜ್ ಬೆಳ್ಳಾರೆ                                  

ಚಿತ್ರ ಕೃಪೆ: ಇಂಟರ್ನೆಟ್ ತಾಣ