ಗುಣುಗದಿರಿ ಕನಸಿನಲಿ ಗೆಳೆಯರೆ

ಮರೆಯದಿರಿ ನನಸಿನಲಿ ಗೆಳೆಯರೆ

 

ಯೋಚನೆಯಲಿ ಪಯಣವು ಬೇಕೆ

ಹೊಡೆಯದಿರಿ ತನುವಿನಲಿ ಗೆಳೆಯರೆ

 

ಗುಬ್ಬಚ್ಚಿಯೊಡನೆ ವಾಸ ಸಾಧ್ಯವೆ

ಕಣ್ಮುಚ್ಚದಿರಿ ಮನಸಿನಲಿ ಗೆಳೆಯರೆ

 

ಊಟದೊಡನೆ ಸವಿಯು ಸೇರಿತೆ

ತೊರೆಯದಿರಿ ಒಲವಿನಲಿ ಗೆಳೆಯರೆ

 

ಮಾತಿನಲಿ ಹೊಂಗನಸಿರಲಿ ಈಶಾ

ತಡೆಯದಿರಿ ಬದುಕಿನಲಿ ಗೆಳೆಯರೆ

 

-ಹಾ ಮ ಸತೀಶ ಬೆಂಗಳೂರು

ಚಿತ್ರ ಕೃಪೆ: ಇಂಟರ್ನೆಟ್ ತಾಣ