ಪ್ರತಿ ಸಲ ಹುಟ್ಟಿದ ದಿನ ಬಂದಾಗ ಆತ ಕುಳಿತು ಯೋಚಿಸುತ್ತಾನೆ ಹಿಂದಿಗಿಂತ ಇಂದು ನನ್ನ ಬದುಕು ಏನು ಬದಲಾಗಿದೆ ಅಂತ. ಪ್ರತೀ ವರ್ಷವೂ ಆತನ ಆತ್ಮೀಯರಾದ ವೇದವ್ಯಾಸರ ಹಾರೈಕೆಯನ್ನು ಪಡೆದುಕೊಳ್ಳುತ್ತಾನೆ. ಅವರಿಂದ ಒಂದಷ್ಟು ಒಳ್ಳೆಯ ಮಾತುಗಳು ಕೂಡ ಅವನಿಗೆ ಸಿಗುತ್ತವೆ. ಈ ವರ್ಷ ತೆರಳಿದಾಗ ಹಿಂದಿನ ವರ್ಷಕ್ಕಿಂತ ಸ್ವಲ್ಪ ಹೆಚ್ಚೇ ಮಾತನ್ನ ಹೇಳಿ ಬಿಟ್ಟಿದ್ದರು. ನೋಡು ನೀನು ಬದುಕುತ್ತಾ ಇದ್ದೀಯಾ? ಒಂದೋ ನಿನ್ನ ಕನಸಿನಂತೆ ಬದುಕಬೇಕು ಅಥವಾ ಬೇರೆಯವರ ಕನಸಿಗಾಗಿ ಬದುಕಬೇಕು ಅಥವಾ ಕನಸು ಕಾಣುತ್ತಾ ಬದಕಬೇಕು. ಇದರಲ್ಲಿ ನಿನ್ನ ಆಯ್ಕೆ ಯಾವುದು ಮತ್ತು ನೀನು ಬದುಕ್ತಾ ಇರುವ ರೀತಿ ಹೇಗಿದೆ ಅನ್ನೋದನ್ನ ಯೋಚನೆ ಮಾಡು ಮೊದಲನೇ ಆಯ್ಕೆ ನಿನ್ನದಾಗಿದ್ದರೆ ಮಾತ್ರ ನಿನ್ನ ಬದುಕುವ ದಾರಿ ಸರಿಯಾಗಿದೆ ಅಥವಾ ಆ ದಾರಿಗಾಗಿ ಸತತ ಪ್ರಯತ್ನವನ್ನು ಪಡು ಒಳ್ಳೇದಾಗುತ್ತೆ. ಅವರ ಈ ಮಾತುಗಳು ಯಾಕೋ ಅವನ ಮನಸ್ಸಿಗೆ ತುಂಬಾ ಇಳಿದು ಬಿಟ್ಟಿತ್ತು ಅದನ್ನೇ ಯೋಚಿಸ್ತಾ ಮನೆಯ ದಾರಿ ಹಿಡಿದಿದ್ದ.

- ಧೀರಜ್ ಬೆಳ್ಳಾರೆ                                  

ಚಿತ್ರ ಕೃಪೆ: ಇಂಟರ್ನೆಟ್ ತಾಣ