ರಾಜೀವ ಮನೆಯೊಳಗೆ ಕಾಲಿಟ್ಟ ತಕ್ಷಣ ಆತನಿಗೆ ಸಂಜೆಯ ತಿಂಡಿ ಕೊಡುವವರಿರಲಿಲ್ಲ, ಹೇಗಿದ್ದೀಯಾ ಅಂತ ಕೇಳುವವರಿರಲಿಲ್ಲ, ಆತ ಎಲ್ಲೆಂದರಲ್ಲಿ ಬಿಸಾಕಿದ ಬಟ್ಟೆಗಳನ್ನು ಮಡಚಿರಲಿಲ್ಲ, ರಾತ್ರಿಗೆ ಊಟ ತಯಾರಿಸುವವರಲಿಲ್ಲ, ಆತನ ಬದುಕು ಗೋಜಲಾಗುವುದ್ದಕ್ಕೆ ಪ್ರಾರಂಭವಾಯಿತು. ಇಷ್ಟು ದಿನ ಯಾಕೆ ನನ್ನ ಗಮನಕ್ಕೆ ಬರಲಿಲ್ಲ ಅನ್ನೋದು ಕೊರೆಯುವುದಕ್ಕೆ ಶುರುವಾಯಿತು. ಎರಡು ದಿನಗಳ ಹಿಂದೆ ತಾಯಿಯನ್ನು ಕಳೆದುಕೊಂಡು ಒಬ್ಬಂಟಿಯಾಗಿದ್ದ. ಮಸಣದಲ್ಲಿ ಮಲಗಿದ್ದ ತಾಯಿಯ ಬೆಲೆ ಕಳೆದುಕೊಂಡ ಮೇಲೆ ಅರ್ಥವಾಗಿತ್ತು. ಒಂದು ದಿನವೂ ಅಮ್ಮನ ಊಟವನ್ನು ಅಮ್ಮನ ಆರೋಗ್ಯವನ್ನು ಅಮ್ಮನ ಬದುಕನ್ನ ಕೇಳದೆ ತನ್ನ ಸ್ವಾರ್ಥಕ್ಕಾಗಿ ನಾನು ತಂದು ಹಾಕ್ತಾ ಇದ್ದೇನೆ, ಅದಕ್ಕೆ ಅಮ್ಮ ಅಡಿಗೆ ಮಾಡ್ತಾ ಇದ್ದಾರೆ, ಅದನ್ನೇ ಅವರು ತಿಂತಾ ಇದ್ದಾರೆ ದಿನವಿಡಿ ಮನೆಯಲ್ಲಿರುವವರಿಗೆ ಏನು ಕೆಲಸ ಅನ್ನುವ ಮೊಂಡುವಾದದಲ್ಲೇ ಬದುಕಿದ್ದ. ಇವತ್ತು ಅಮ್ಮನ ಕೆಲಸ ಏನು ಅನ್ನೋದು ಅರ್ಥ ಆಯಿತು. ಅವರ ಇಡೀ ದಿನದ ಬೆಲೆ ಗೊತ್ತಾಯ್ತು. ಈಗ ಅಮ್ಮನ ಭಾವಚಿತ್ರದ ಮುಂದೆ ಕುಳಿತು ಅಳುತ್ತಿದ್ದಾನೆ ತಪ್ಪಾಯ್ತು ಅಂತ ಕೇಳಿಕೊಳ್ಳುತ್ತಿದ್ದಾನೆ, ಇದೇ ಮಾತನ್ನು ಬದುಕಿದ್ದಾಗ ಕೇಳಿದ್ರೆ ಅಮ್ಮ ಬದುಕಿರುತ್ತಿದ್ದಳು.

- ಧೀರಜ್ ಬೆಳ್ಳಾರೆ                                  

ಚಿತ್ರ ಕೃಪೆ: ಇಂಟರ್ನೆಟ್ ತಾಣ