ನೀನಿರದೆ ಮಧುವಿಂದು, ಸವಿಯೇ ಗೆಳತಿ

ನಾನಿರದೆ ದಿನವಿಂದು, ಕನಸೇ ಗೆಳತಿ

 

ಜೀವನದಿ ಮಜವಿಂದು, ಎಲ್ಲಿದೆ ಹೇಳೆ

ಮರೆಯಾದ ಪುಟವಿಂದು, ಬರದೇ ಗೆಳತಿ

 

ತೀರದಿಹ ತನುವಿಂದು, ನೋಡೇ ಸನಿಹ

ಕಾಣುತಿಹ ಚೆಲುವಿಂದು, ಬೆಳಕೇ ಗೆಳತಿ

 

ಚಿತ್ರಗಳ ಪಟವಿಂದು, ಚೆಲುವನು ಬೆಸೆಯೆ

ಮಾತುಗಳ ಮನವಿಂದು, ಒಲವೇ ಗೆಳತಿ

 

ಕಂಪನೆಯ ಹಿತವಿಂದು, ಕಂಡೆಯ ಈಶ

ತಂಪನೆಯ ಕರವಿಂದು, ಹೊಳಪೇ ಗೆಳತಿ

 

-ಹಾ ಮ ಸತೀಶ ಬೆಂಗಳೂರು

ಚಿತ್ರ ಕೃಪೆ: ಇಂಟರ್ನೆಟ್ ತಾಣ