ಬರಹ

ಕ್ಕೆ

ಬರ

ಬರಬಾರದು !

*

ಬರಹದ

ತೂಕ

ಕಳಕೊಂಡ

ಕ್ಷಣ

ಬರಹಗಾರ

ಮೌನಿ !

*

ಬರಹಗಳಲ್ಲಿಯ

ದೋಷಗಳ

ಹೇಳಿ

ಸ್ನೇಹ

ಕಳೆದುಕೊಳ್ಳಬೇಡಿ !

*

ಕಪ್ಪು

ಬೊಟ್ಟಿಗೂ

ಮಹತ್ವ

ಇದೆ

ಗ್ರಹಣ

ಬಂದಾಗ !

*

ಚಿಂತಕರ

ಚಿಂತನೆ

ಓದುಗರಿಗೆ

ಮಾತ್ರ !

*

ಈಗಿನ ಯುವ ಜನತೆ, ಜೊತೆಗೆ 

ನಮಗೆಲ್ಲ ಬಹಳ ತಿಳಿದಿದೆ 

ಎನ್ನುವವರ ನಡುವೆ

ಹಿರಿಯರೆಂದೆನಿಸಿಕೊಂಡವರು

ಸುಮ್ಮನೆ ಇರುವುದೇ ಲೇಸು!

*

ಬದುಕಲ್ಲಿ

ಕತೆಗಳು

ಸೃಷ್ಟಿಯಾಗಲಿ ,

ನೋಡು

ನೋಡುತ್ತಾ

ಬಾಳೊಂದು

ಕಾದಂಬರಿಯಾಗುತ್ತದೆ !

*

ಒಂದು ಕಡೆ ಗಂಡ

ಇನ್ನೊಂದು ಕಡೆ

ಹಣದ ಚೀಲವಿಟ್ಟು

ಹೆಣ್ಣನ್ನು ಬಿಟ್ಟಲ್ಲಿ

ಮೊದಲು

ಹಣದ ಚೀಲವ

ಪಡೆದು

ನಂತರವೇ

ಗಂಡನ ಕೈ ಹಿಡಿದು

ಮುನ್ನಡೆವಳು

ಸತಿಯು ! 

*

ಕೂಸುಗಳಲ್ಲಿ

ನೂರಾರು ಕನಸಿದೆ

ಕಾಸುಗಳಲ್ಲೂ !

-ಹಾ ಮ ಸತೀಶ ಬೆಂಗಳೂರು

ಚಿತ್ರ ಕೃಪೆ: ಇಂಟರ್ನೆಟ್ ತಾಣ