ಮಧು ಚಂದ್ರದ ಹುಣ್ಣಿಮೆಯ ದಿನ ನಿನ್ನ ಬರುವಿಕೆಗಾಗಿ ಕಾಯುತ್ತಿದ್ದೇನೆ ಒಡತಿ
ಮನದೊಳಗಿನ ಒಲವ ಹಾಗೇ ತಬ್ಬಿ ಹಿಡಿದು ನಿನಗಾಗಿಯೇ ಕುಳಿತ್ತಿದ್ದೇನೆ ಒಡತಿ
ಸುಖದ ಅಮಲಿನ ನಡುವೆ ಬೀಸುವ ತಂಗಾಳಿಗೆ ಮತ್ತಷ್ಟು ಮರೆಸಿದೆ ನಿದಿರೆಯನು
ಎದೆ ಬಯಕೆಯ ನಲಿವ ಉಲಿವ ಹೊಸ ಮನ್ವಂತರವ ಬಯಸುತ್ತಿದ್ದೇನೆ ಒಡತಿ
ಅರಳಿರುವ ಕೆಂಪು ಹೂವಿನ ನೆತ್ತರು ಹರಡದಿರಲಿ ಸುತ್ತ ಮುತ್ತಲು ಸಖ ಇರುವಾಗ
ಪ್ರೀತಿ ಉಕ್ಕುತ್ತಿರುವ ಸಮಯ ಸನಿಹವೇ ಇರು ನೀನೆಂದೂ ಕೇಳುತ್ತಿದ್ದೇನೆ ಒಡತಿ
ಅರಮನೆಯೊಳಗಿನ ಒಲವಿನಾಸರೆಯ ಬದುಕು ಗೂಡೊಳಗೆ ಜೊತೆ ಬಾರದಿರಲಿ
ಬಡವರ ಗುಡಿಸಲಿನಲ್ಲಿ ಸಿಗುವ ನನಸಿನಾಳದ ಪ್ರೇಮಗಳ ಹುಡುಕುತ್ತಿದ್ದೇನೆ ಒಡತಿ
ಸಕಲ ವಾಲಗದೊಡನೆ ಹಸೆಮಣೆಯನ್ನೇರಿ ಶಾಸ್ತ್ರಗಳ ಮುಗಿಸಿ ಹೊರಟಿರುವೆ ಸವಿಯೆ
ನಲುಮೆಯ ಹೂವ ಮಂಚಕೆ ಮದನ ಇಂದ್ರನಾಗಿ ನಿನ್ನ ನಾ ಕರೆಯುತ್ತಿದ್ದೇನೆ ಒಡತಿ
-ಹಾ ಮ ಸತೀಶ ಬೆಂಗಳೂರು
ಚಿತ್ರ ಕೃಪೆ: ಇಂಟರ್ನೆಟ್ ತಾಣ
ಪ್ರತಿಕ್ರಿಯೆ (0)
ಇನ್ನೂ ಯಾವುದೇ ಪ್ರತಿಕ್ರಿಯೆಗಳಿಲ್ಲ. ಮೊದಲ ಪ್ರತಿಕ್ರಿಯೆ ಮಾಡಿ!