ಮೈಮೇಲಿನ ಕಂಬಳಿಯು,ಹೊದ್ದಲ್ಲೇ ಇರಲಿ

ಕನ್ನಡಿಯನು ನೋಡದಿರು,ಇದ್ದಲ್ಲೇ ಇರಲಿ

 

ನನಗೆಲ್ಲ  ತಿಳಿದಿದೆ,ಎನ್ನುವವ ಬೇಕೇನು

ಗದರಿದರು ಹೋಗದಿರೆ,ಬಿದ್ದಲ್ಲೇ ಇರಲಿ

 

ಈ ನೆಲದ ತಿರುಕನಿಗೆ,ಅನ್ಯಭಾಷೆಯ ಗೀಳು

ಪುಟ ತಿರುವಿ ಸಾಗಿದರು, ಸದ್ದಲ್ಲೇ ಇರಲಿ

 

ಹೊಟ್ಟೆ ಕಿಚ್ಚನು ಮರೆತು, ಸ್ನೇಹವನು ಗಳಿಸಿಕೊ

ಎಂಥಾ ಸೊಬಗಿನ ನೋಟ, ಕದ್ದಲ್ಲೇ ಇರಲಿ

 

ಬೇಡುತಿಹನು ಇಂದವನು, ಅಂದು ರಾಜನು ಈಶ

ಅಕ್ಕಿಯ ಸಾಂಗತ್ಯ ಎಂದೂ, ಉದ್ದಲ್ಲೇ ಇರಲಿ

 

-ಹಾ. ಮ ಸತೀಶ ಬೆಂಗಳೂರು

ಚಿತ್ರ ಕೃಪೆ: ಇಂಟರ್ನೆಟ್ ತಾಣ