ಸನಾತನ ಸಂಸ್ಥೆಯ "ಸನಾತನ ಪ್ರಭಾತ"

ಸನಾತನ ಸಂಸ್ಥೆಯು ಪ್ರಕಟಿಸುವ ಸಂಸ್ಥೆಯ ಮುಖವಾಣಿ ಸಾಪ್ತಾಹಿಕ (ವಾರಪತ್ರಿಕೆ)ವಾಗಿದೆ "ಸನಾತನ ಪ್ರಭಾತ". ೨೫ ವರ್ಷಗಳ ಹಿಂದೆ ಆರಂಭಗೊಂಡ "ಸನಾತನ ಪ್ರಭಾತ"ವು ಪ್ರಸ್ತುತ ೧೬ ಪುಟಗಳೊಂದಿಗೆ ಟ್ಯಾಬ್ಲಾಯ್ಡ್ ಆಕಾರದಲ್ಲಿ ಬರುತ್ತಿದೆ.

"ಹಿಂದೂ ರಾಷ್ಟ್ರಕ್ಕಾಗಿ - ಕಟಿಬದ್ಧ ಸಾಪ್ತಾಹಿಕ" ಎಂಬ ಘೋಷಣೆಯೊಂದಿಗೆ ಪ್ರಕಟವಾಗುವ ಪತ್ರಿಕೆಯ ಬಿಡಿ ಸಂಚಿಕೆಯ ಬೆಲೆ ೮ ರೂಪಾಯಿ. ವಾರ್ಷಿಕ ಚಂದಾ ಮೊತ್ತ ೪೦೦ ರೂಪಾಯಿಗಳು. ಪ್ರಕಾಶಕರು, ಮಾಲಕರು ಮತ್ತು ಮುದ್ರಕರು ಜಿ. ವಿವೇಕ್ ಪೈ. ಪತ್ರಿಕೆಯ ಮತ್ತು ಸನಾತನ ಸಂಸ್ಥೆಯ ಕೇಂದ್ರ ಪ್ರಧಾನ ಕಚೇರಿ ಗೋವಾದಲ್ಲಿದೆ. ಸಂಪಾದಕರು ಮೂಲ್ಕಿ ಚಿತ್ರಾಪುವಿನ ಯೋಗೇಶ್ ವಾಮನ್ ರಾವ್ ಜಲ್ತಾರೆ. ಪತ್ರಿಕೆಯನ್ನು ಗೋವಾದ ಪ್ರಿಂಟಿಂಗ್ ಪ್ರೆಸ್ ನಲ್ಲಿ ಮುದ್ರಿಸಲಾಗುತ್ತಿದೆ.

ಸನಾತನ ಸಂಸ್ಥೆಯ ಸ್ಥಾಪಕರಾದ ಡಾ. ಜಯಂತ ಆಠವಲೆ ಅವರ ಬದುಕು - ವ್ಯಕ್ತಿತ್ವ - ಅದ್ಯಾತ್ಮಿಕ ಸಾಧನೆ - ವಿಚಾರಗಳ ಪ್ರಚಾರ ಮತ್ತು ಹಿಂದೂ ರಾಷ್ಟ್ರದ ಸ್ಥಾಪನೆಗಾಗಿ ಹಿಂದುತ್ವದ ಪ್ರಚಾರದೊಂದಿಗೆ ಧಾರ್ಮಿಕ ಬರಹಗಳನ್ನು ಪ್ರಕಟಿಸುವುದು "ಸನಾತನ ಪ್ರಭಾತ" ಆದ್ಯತೆ ಮತ್ತು ಉದ್ಧೇಶವಾಗಿದೆ.

~ ಶ್ರೀರಾಮ ದಿವಾಣ