ಅವನು ಸೇವಕನಂತೆ. ಆತನಿಗೊಂದು ದೊಡ್ಡ ಮನೆ ಇದೆ. ಅವನ ಮನೆಯಲ್ಲಿರುವವರೆಲ್ಲರೂ ಐಷಾರಾಮಿ ಜೀವನ ನಡೆಸುತ್ತಿದ್ದಾರೆ, ಆತನಿಗೆ ಸ್ವಂತದಲ್ಲದೆ ನಾವೇ ಸಂಬಳ ಕೊಟ್ಟು ಗಾಡಿ ಕೊಟ್ಟಿದ್ದೇವೆ, ಚಾಲಕನನ್ನ ನೀಡಿದ್ದೇವೆ. ಲಕ್ಷಗಟ್ಟಲೆ ಆರೋಗ್ಯದ ಬಿಲ್ಲು ಸಂದಾಯವಾಗುತ್ತದೆ. ಎಲ್ಲೆಂದರಲ್ಲಿ ತಿರುಗಾಡಲು ವ್ಯವಸ್ಥೆ ಇದೆ. ಎಲ್ಲದರಲ್ಲೂ ಆತನಿಗೆ ಗೌರವ ಹೆಚ್ಚೇ...ದುಡ್ಡು ಪ್ರತಿ ವರ್ಷ ಸಂಪಾದನೆ ಹೆಚ್ಚು ಹೆಚ್ಚು ಮಾಡುತ್ತಿದ್ದಾನೆ. ಆತನನ್ನು ಕೆಲಸಕ್ಕೆ ಇಟ್ಟುಕೊಂಡವರು ನಾವಂತೆ. ನಮ್ಮಿಂದಲೇ ಆತನಿಗೆ ಸಂಬಳ ಹೋಗುವುದಂತೆ. ನಮ್ಮ ಮನೆಯ ಸಾಲ ಇನ್ನು ತೀರುತ್ತಿಲ್ಲ, ಒಂದು ಹೊತ್ತಿನ ಊಟಕ್ಕೂ ಪರದಾಡುವ ಪರಿಸ್ಥಿತಿ ಇದೆ, ರಸ್ತೆ ಮಧ್ಯದಲ್ಲಿ ಅಪಘಾತವಾಗಿ ಸತ್ತಾಗ ಕೇಳುವವರಿರಲಿಲ್ಲ, ಕಷ್ಟಗಳನ್ನು ಕೇಳುವುದಕ್ಕೆ ಹೋದರೆ ಆತ ಊರಲ್ಲಿ ಇರುವುದಿಲ್ಲ. ಕೃಷಿ ಅಧ್ಯಯನಕ್ಕೆಂದು ವಿದೇಶ ಪ್ರವಾಸಕ್ಕೆ ಕೈಗೊಳ್ಳುತ್ತಾನೆ ಒಂದು ದಿನವೂ ಗದ್ದೆಯಲ್ಲಿ ನಡುಬಗ್ಗಿಸಿ ದುಡಿದವನಲ್ಲ, ಆತನ ಹಿಂಬಾಲಕರೆಲ್ಲರಿಗೂ ದೊಡ್ಡ ದೊಡ್ಡ ಪದವಿಗಳು ಸಿಗುತ್ತವೆ, ಆತ ಸೇವಕ, ನಾವಿನ್ನು ಒಳಿತಾಗುತ್ತದೆ ಎಂದು ಕೈ ಮುಗಿದು ಕುಳಿತಿದ್ದೇವೆ ನಾವು ರಾಜರಂತೆ. ಹೀಗೊಂದು ಕತೆ ಹೇಳಿದರೆ ನೀವು ನಗುತ್ತೀರಿ ತಾನೇ. ನಾವು ನಗಲೇಬೇಕು ಅದನ್ನು ಬಿಟ್ಟು ಬೇರೆ ಏನು ಮಾಡುವ ಹಾಗಿಲ್ಲ...
- ಧೀರಜ್ ಬೆಳ್ಳಾರೆ
ಚಿತ್ರ ಕೃಪೆ: ಇಂಟರ್ನೆಟ್ ತಾಣ
ಪ್ರತಿಕ್ರಿಯೆ (0)
ಇನ್ನೂ ಯಾವುದೇ ಪ್ರತಿಕ್ರಿಯೆಗಳಿಲ್ಲ. ಮೊದಲ ಪ್ರತಿಕ್ರಿಯೆ ಮಾಡಿ!