ಆಶೀಕೀ ಚಿತ್ರದಲ್ಲಿ ಕುಮಾರ್ ಸಾನು ಗಾಯಕನು ಹಾಡಿದ ಈ ಹಾಡನ್ನು ಹಿಂದೆ 94 ನೇ ಅನುಕ್ರಮ ಸಂಖ್ಯೆಯಲ್ಲಿ ಅರ್ಧಂಬರ್ಧ ಅನುವಾದ ಮಾಡಿ ಈ ತಾಣದಲ್ಲೇ ಬ್ಲಾಗ್ ಬರೆದಿದ್ದೆ.
ಈಗ ಆ ಹಾಡನ್ನು ಪೂರ್ತಿಯಾಗಿ ಅದೇ ಧಾಟಿಯಲ್ಲಿ ಹಾಡಬಹುದಾದಂತೆ ಅನುವಾದಿಸಿದ್ದೇನೆ.
ಕಣ್ಣುಗಳ ಮುಂದೆಯೂ ಹೃದಯ ಸವೀಪವೂ
ಒಬ್ಬಳು ಇದ್ದಾಳೆ ಅದು ನೀನೇನೇ IIಪII
ನಿರಾಶೆ ಅಂದರೆ ಏನಂತ
ಕೇಳು ನನ್ನ ಹೃದಯಾನ
ಹೊರಗೆ ಬಿದ್ದೆನು ಏಕಾಕಿ
ನಾನು ತುಂಬಿದ ಸಭೆಯಿಂದ
ಸತ್ತೇ ಹೋದೇನು ನಾ
ಆಗಿ ನಿನ್ನಿಂದ ಬೇರೆ || ೧ ||
ಬದುಕಲು ಬಿಡದು ಒಂಟಿತನ
ಕಾಡುವುದು ನನ್ನ ಬೇಸರವು
ನೋಡದೆ ಇರಲು ನಿನ್ನನ್ನು
ಹೃದಯಕೆ ತುಂಬಾ ತಳವಳವು
ಈಗ ದೂರ ನಿನ್ನಿಂದ
ಹೋದರೆ ಇರೆನು ನಾ II ೨II
ಪ್ರತಿಕ್ರಿಯೆ (0)
ಇನ್ನೂ ಯಾವುದೇ ಪ್ರತಿಕ್ರಿಯೆಗಳಿಲ್ಲ. ಮೊದಲ ಪ್ರತಿಕ್ರಿಯೆ ಮಾಡಿ!