ಶಾಸ್ತ್ರಿಗಳ ಮಗನ ಪ್ರಕಾರ ಊರಲ್ಲಿರುವುದು ವ್ಯರ್ಥ. ಅಲ್ಲಿ ಏನೂ ಇಲ್ಲ. ನಾಲ್ಕು ಗೋಡೆಗಳನ್ನು ಕಟ್ಟಿ ಬದುಕು ಕಟ್ಟಿಕೊಂಡಿದ್ದಾರೆ ಆದರೆ, ಪ್ರಸ್ತುತ ಕಾಲಘಟ್ಟದಲ್ಲಿ ಅಲ್ಲಿ ಅದ್ಭುತವಾದ ಬದುಕು ಕಟ್ಟಿಕೊಳ್ಳುವುದಕ್ಕೆ ಸಾಧ್ಯವಿಲ್ಲ. ಶಿಕ್ಷಣದ ಕೊರತೆ ಕಂಡಿರುವ ಊರು ಉದ್ಯೋಗ ಹುಡುಕುವುದಕ್ಕೆ ಯಾವ ಅವಕಾಶವೂ ಅಲ್ಲ ಹೊಸ ಉದ್ಯಮ ಹೊಸ ವಸ್ತುಗಳು ಅಲ್ಲಿಗೆ ಪರಿಚಯವಾಗುವಾಗ ವರ್ಷಗಳೇ ದಾಟಿರುತ್ತವೆ. ನೆಟ್ವರ್ಕ್ ಅಂತೂ ದೂರದ ಮಾತು ಕರೆಂಟ್ ಇರುವ ಮನೆಗಳೆ ಕಡಿಮೆ ಪ್ರತಿದಿನ ಮನೆಯಲ್ಲಿ ಏನಾದ್ರು ಒಂದು ಕಾರ್ಯಕ್ರಮ ಆ ಊರು ಬಿಟ್ಟು ಬನ್ನಿ ಅಂತ ಮತ್ತೆ ಮತ್ತೆ ಒತ್ತಾಯ ಮಾಡ್ತಾ ಇರ್ತಾನೆ. ಆದರೆ ಅದೇ ಊರಲ್ಲಿ ಬದುಕುತ್ತಿರುವ ಶಾಸ್ತ್ರಿಗಳಿಗೆ ಆ ಊರೇ ದೇವಾಲಯ. ಜಾತಿ, ಧರ್ಮ ಅಂತ ಹೊಡೆದಾಟವಿಲ್ಲದೆ ಪ್ರತಿಯೊಬ್ಬರೂ ಪ್ರತಿಯೊಬ್ಬರ ಮನೆಗೆ ಪ್ರತಿದಿನವೂ ಓಡಾಡ್ತಾರೆ. ಯಾವ ಆಡಂಬರವಿಲ್ಲದೆ ಎಲ್ಲರೂ ಜೊತೆಯಾಗುತ್ತಾರೆ ಬೇಲಿ ಇಲ್ಲದ ಮನೆಗಳು. ಅದು ನೆಮ್ಮದಿಯ ಬದುಕಿಗೆ ಉಸಿರು ನೀಡುವ ತಾಣವದು. ಅವರ ಪ್ರಕಾರ ಅಲ್ಲಿ ಎಲ್ಲವೂ ಇದೆ ಪೇಟೆಯ ಜಂಜಾಟ ಒಂದಿಲ್ಲ. ಬದುಕಿನ ಓಟ ಅಲ್ಲಿಲ್ಲ ಎಲ್ಲರಿಗೂ ನೆಮ್ಮದಿ ಜೊತೆಯಾಗಿರುತ್ತದೆ.
- ಧೀರಜ್ ಬೆಳ್ಳಾರೆ
ಚಿತ್ರ ಕೃಪೆ: ಇಂಟರ್ನೆಟ್ ತಾಣ
ಪ್ರತಿಕ್ರಿಯೆ (0)
ಇನ್ನೂ ಯಾವುದೇ ಪ್ರತಿಕ್ರಿಯೆಗಳಿಲ್ಲ. ಮೊದಲ ಪ್ರತಿಕ್ರಿಯೆ ಮಾಡಿ!