ಕಷ್ಟ ಜೀವನವನ್ನು ಹೀಗೆ ಮುಂದುವರಿಸುವುದಕ್ಕೆ ತುಂಬಾ ಕಷ್ಟ ಆಗುತ್ತಾ ಇದೆ. ಅಂದುಕೊಂಡದ್ದು ಯಾವುದೂ ಸಾಧನೆ ಆಗ್ತಾ ಇಲ್ಲ. ಕನಸುಗಳೆಲ್ಲವೂ ಊರು ಬಿಟ್ಟಿವೆ. ಹಣವಂತೂ ನನ್ನ ಪರಿಚಯವಿಲ್ಲದಂತೆ ಅಪರಿಚಿತನಾಗಿ ಬಿಟ್ಟಿದೆ. ಜೊತೆಗಿರುವವರೆಲ್ಲರೂ ಸ್ವಾರ್ಥಿಗಳಾಗಿದ್ದಾರೆ. ನನ್ನಲ್ಲಿ ಪ್ರತಿಭೆ ಇದ್ದರು ಗುರುತಿಸುವವರಿಲ್ಲದೆ ಎಲ್ಲವೂ ಮರೆತೆ ಬಿಟ್ಟಿದೆ.ಬದುಕುವುದೇ ವ್ಯರ್ಥ ಅಂತಂದುಕೊಂಡು ರಾಜೇಶ ಸಾವಿನ ದಾರಿಯನ್ನು ಹುಡುಕುತ್ತಾ ನಡೆದುಬಿಟ್ಟಿದ್ದ. ಆಗ ಎದುರಿನಲ್ಲಿ ಹಾದು ಹೋಗುತ್ತಿದ್ದ ದನವೊಂದನ್ನು ನೋಡಿ ಮನಸ್ಸಿನ ಆಲೋಚನೆಗಳೆಲ್ಲವೂ ಒಮ್ಮೆ ಬದಲಾಗಿಬಿಟ್ಟಿತು. ತನ್ನೊಂದು ಕಾಲನ್ನ ಕಳೆದುಕೊಂಡಿರುವ ದನ ಪ್ರತಿ ಹೆಜ್ಜೆಯನ್ನ ತುಂಬ ಕಷ್ಟಪಟ್ಟು ಇಡುತ್ತಾ ಮುಂದೆ ಸಾಗುತ್ತಿತ್ತು. ಕಾಲಿಲ್ಲದ್ದಕ್ಕೆ ವ್ಯಥೆ ಪಡದೆ, ಪ್ರತಿ ಕ್ಷಣವನ್ನು ಸಂಭ್ರಮ ಪಡುತ್ತಾ, ಸಿಕ್ಕಲ್ಲಿ ತಿಂದು ಬದುಕನ್ನ ಸುಂದರವಾಗಿಸಿದೆ. ನೋವುಗಳ ನಡುವೆ ನೆಮ್ಮದಿ ಹುಡುಕುತ್ತಾ ನಿರಾಸೆಗಳ ನಡುವೆ ಭರವಸೆಯ ಕಾಣಬೇಕಂದುಕೊಂಡು ಮತ್ತೆ ಸಂಭ್ರಮದಿಂದ ಮನೆಯ ಕಡೆಗೋಡಿಬಿಟ್ಟ...ಬದುಕುವಾಸೆಯಿಂದ.
- ಧೀರಜ್ ಬೆಳ್ಳಾರೆ
ಚಿತ್ರ ಕೃಪೆ: ಇಂಟರ್ನೆಟ್ ತಾಣ
ಪ್ರತಿಕ್ರಿಯೆ (0)
ಇನ್ನೂ ಯಾವುದೇ ಪ್ರತಿಕ್ರಿಯೆಗಳಿಲ್ಲ. ಮೊದಲ ಪ್ರತಿಕ್ರಿಯೆ ಮಾಡಿ!