ಅವನು ಅಳುತ್ತಿದ್ದಾನೆ. ಬಸ್ಸು ಬರುವುದಕ್ಕೆ ಇನ್ನೂ ಸಮಯವಿದೆ ಬಸ್ಸು ನಿಲ್ದಾಣದಲ್ಲಿ ಕೈಯಲ್ಲಿ ಬ್ಯಾಗು ಹಿಡಿದು ಕಣ್ಣೀರಿಳಿಸುತ್ತಿದ್ದಾನೆ. ಆತನ ಕಣ್ಣೀರಿನ ಹಿಂದೆ ಕಳೆದುಕೊಂಡ ನೋವಿಲ್ಲ, ದೂರವಾಗುವ ಭಯವಿಲ್ಲ, ಆದರೆ ವಹಿಸಿಕೊಂಡ ಜವಾಬ್ದಾರಿಯನ್ನ ನೆನೆದು ಕಣ್ಣೀರಿಳಿಸುತ್ತಿದ್ದಾನೆ. ಕಷ್ಟ ಪಟ್ಟು ಕೆಲಸವೊಂದನ್ನ ಸಂಪಾದಿಸಿದ. ಮನೆಯ ಜವಾಬ್ದಾರಿ ಇರುವ ಕಾರಣ ಕೆಲಸದಲ್ಲಿ ಹೊಸ ಹೊಸ ಜವಾಬ್ದಾರಿಗಳನ್ನ ಹೆಗಲಿಗೆ ಏರಿಸಿಕೊಂಡ. ಎಲ್ಲವನ್ನು ನಿಭಾಯಿಸಾಗಿದೆ ಈಗ ಕೆಲಸಗಳ ಪಟ್ಟಿ ಬೆಳಿತಾ ಇದೆ ಹೊರತು ಸಂಬಳದಲ್ಲಿ ಏರಿಕೆಯಾಗುತ್ತಿಲ್ಲ. ಬದುಕು ಕಷ್ಟವೆನಿಸುತ್ತಿದೆ. ಇದ್ದ ಕೆಲಸವನ್ನ ತೊರೆದು ಹೊರಟರೆ ಮನೆಯಲ್ಲಿ ನಂಬಿಕೊಂಡವರು ಮೌನವಾಗುತ್ತಾರೆ. ಮತ್ತೆ ಕೆಲಸವನ್ನು ತೊರೆಯದಂತ ಪರಿಸ್ಥಿತಿ ನಿರ್ಮಾಣವಾಗಿದೆ. ತನ್ನ ಬದುಕಿನ ಕೆಲವೊಂದು ನಿರ್ಧಾರಗಳ ಮೇಲೆ ಪರಿಸ್ಥಿತಿಯನ್ನು ನೆನೆದು ಕಣ್ಣೀರಿಳಿಸುತ್ತಿದ್ದಾನೆ. ಮನಸ್ಸು ಹಗುರಾಯಿತು ಕಣ್ಣೀರು ಒರೆಸ್ಕೊಂಡು ಮುಖದಲ್ಲಿ ನಗುವನ್ನು ಧರಿಸಿಕೊಂಡು ಮತ್ತೆ ಕೆಲಸದ ಕಡೆಗೆ ಹೊರಡುವ ಮನಸ್ಸಿನಿಂದ ಬಸ್ಸನ್ನೇರಿದ. ಕ್ಷಣವನ್ನು ಮರೆತುಬಿಟ್ಟ ಮುಂದಿನ ಕ್ಷಣವನ್ನು ಜೀವಿಸುವುದಕ್ಕೆ ನಿರ್ಧರಿಸಿದ.
- ಧೀರಜ್ ಬೆಳ್ಳಾರೆ
ಚಿತ್ರ ಕೃಪೆ: ಇಂಟರ್ನೆಟ್ ತಾಣ
ಪ್ರತಿಕ್ರಿಯೆ (0)
ಇನ್ನೂ ಯಾವುದೇ ಪ್ರತಿಕ್ರಿಯೆಗಳಿಲ್ಲ. ಮೊದಲ ಪ್ರತಿಕ್ರಿಯೆ ಮಾಡಿ!