ಗೆಳತೀ, ಸುಂದರವಾಗಿ ಇರುವ, ತಾರೆಯಂತೆ ತಿಳಿಯು

ಗೆಳತೀ,ಮಧುರವಾದ ಸುಧೆಯಾ, ಸವಿಯಂತೆ ತಿಳಿಯು

 

ಹೊತ್ತಿಲ್ಲದೆ ಬಂದರಿಂದೂ,ಬಾಯಿ ತುಂಬ ನಕ್ಕೆಯಲ್ಲೇ

ಗೆಳತೀ,ಚೆಲುವ ಸನಿಹವೂ, ಸುವಾಸನೆಯಂತೆ ತಿಳಿಯು

 

ಗೊತ್ತು ಗುರಿಯಿಲ್ಲದ ಬದುಕು, ಸಂತೆಯೆಂದೆ ಅಲ್ಲವೇ

ಗೆಳತೀ,ಮತ್ತಿನಾ ಮುತ್ತಿನ,ಮದಿರೆಯಂತೆ ತಿಳಿಯು

 

ಚಿತ್ತಾರದ ಪುಟಗಳ ಬಾಳೂ, ಕನಸೆಂದೆಯೇ ಯಾಕೆ

ಗೆಳತೀ,ನಶೆ ಕೂಡ ಒಂದೊಳ್ಳೆ,ನಡತೆಯಂತೆ ತಿಳಿಯು

 

ಮುತ್ತು ತಂದು ಎದುರಿಟ್ಟರೂ, ನೀ ಕಾಡಲಿಲ್ಲ  ಏಕೆ

ಗೆಳತೀ,ನಿರ್ಮಲ ಹೃದಯದಿ ನೀ, ರಾಣಿಯಂತೆ ತಿಳಿಯು

 

-ಹಾ ಮ ಸತೀಶ ಬೆಂಗಳೂರು

ಚಿತ್ರ ಕೃಪೆ: ಇಂಟರ್ನೆಟ್ ತಾಣ