ಜ್ಞಾನ ಜ್ಯೋತಿಯ

ಉರಿಸುತ್ತಲೇ ಸಾಗು

ಮನದೊಳಗೆ !

*

ಕಪ್ಪೆಗಳಂತೆ ನೀನು

ವಟಗುಟ್ಟ ಬೇಕೇನು

ರಾಜಕಾರಣಿಯಾಗು !

*

ಜನರ ಮೇಲೆ

ಎರಗುವ ನಾಯಕ

ದೇಶ ದ್ರೋಹಿಯು !

*

ಉಪ್ಪಿರದಿಹ

ಸಾರು, ಸಾರವಿರದ

ಮಾತದು ಸಪ್ಪೆ !

*

ಬರೆಹ ಬರೆವ 

ಮೊದಲೇ 

ಹೂಸು ಬಿಟ್ಟರೆ 

ಬಿಡು !

ಬರೆದ ಮೇಲೆ 

ಬಿಟ್ಟರೇ ?

ಹೋದ ಹೋದಲೆಲ್ಲಾ 

ವಾಸನೆ ಬಂದೀತು 

ಜೋಕೆ!

*

ಯಾರನ್ನೋ 

ನೆನಪಿಸಿಕೊಂಡು 

ಬರೆದ ಬರೆಹ 

ಶಾಶ್ವತವಲ್ಲ  !

*

ಗೊತ್ತಿರುವನು

ತಾನೆನದಿರು

ಸುತ್ತಲೂ 

ಗತ್ತಿರುವವರು

ಇದ್ದಾರೆ,

ಮತ್ತೂ 

ಮುಂದುವರೆಸಿದರೆ ?

ಸತ್ತ ಎಮ್ಮೆಯ ರೀತಿ 

ನೀನಾಗುವಿಯೋ

ರಾಮ ರಾಮ!

-ಹಾ ಮ ಸತೀಶ ಬೆಂಗಳೂರು

ಚಿತ್ರ ಕೃಪೆ: ಇಂಟರ್ನೆಟ್ ತಾಣ