ಇತ್ತೀಚಿನ ದಿನಗಳಲ್ಲಿ , 

ಕವಿಯೆನಿಸಿದ

ಬುರುಡೆ ದಾಸನು

ತಾನೊಬ್ಬನೇ 

ಬರೆಹಗಾರ

ಎನ್ನುತ್ತಾ,

ಗಲ್ಲಿ ಗಲ್ಲಿಗಳಲ್ಲಿ 

ಎಲ್ಲೆಂದರಲ್ಲಿ 

ಏನೇನೋ 

ಬರೆಯುತ್ತಾ

ತಿರುಗುತ್ತಿದ್ದಾನೆ

ಎಚ್ಚರ ಓದುಗ ಎಚ್ಚರ !

 

ತನುವೊಳಗೆ 

ತಾನೊಬ್ಬನೇ ಸುಬಗ 

ಬರಹಗಾರನು ಎನ್ನುತ್ತಾ,

ಬೆಳೆಯುತ್ತಿರುವ ಇನ್ನೊಬ್ಬನ 

ತುಳಿಯಲು ಉಪಯೋಗಿಸುವ

ತನ್ನ ಲೇಖನಿಯ ! 

ಕೊನೆಗೆ 

ವಟಗುಟ್ಟುವ ಕಪ್ಪೆಯಂತೆ

ಬಾವಿಯೊಳಗೇ 

ಉಳಿಯುವನವನು

ಎಚ್ಚರ ಓದುಗ ಎಚ್ಚರ !

 

ವಿದ್ಯೆ, ಕಲಿತರೂ

ಇವನಿಗೆ 

ಬುದ್ದಿ ಬರಲಿಲ್ಲ,

ಬುದ್ದಿ ಬರುವಾಗ 

ವಿದ್ಯೆ ಮರೆತನಂತೆ

ಮತ್ತೆ ಕೇಳಬೇಕೇ ?

ಬರೆದ ಬರೆಹಗಳೆಲ್ಲ 

ತೌಡು ಕುಟ್ಟಿದಂತೆ

ಎಚ್ಚರ ಓದುಗ ಎಚ್ಚರ!

 

ಅಹಂನಿಂದ ಹೊರ ಬಾ

ಕಲಿತಿರುವುದಕ್ಕೆ,

ಕಲಿಸಿದವರಿಗೆ ಶರಣಾಗು

ಪುಡಿ ಬರಹಗಾರರ ಕೂಟಕ್ಕೆ 

ನೀನು, ಸೇರದಿರು

ಕಾರಣ ನೂರಾರು ಕೊಡಬಲ್ಲೆ !

ಏನೋ ಲಾಗ ಹೊಡೆದು 

ಹೊರತಂದಿರುವ ಪುಸ್ತಕಗಳು 

ಮನೆಯ ಕಪಾಟಿನಲ್ಲಿ 

ಓದುಗರಿಲ್ಲದೆ ಬೂಸಾ ಆಗಿರಬಹುದು  ?

ಎಚ್ಚರ ಓದುಗ ಎಚ್ಚರ!

-ಹಾ ಮ ಸತೀಶ ಬೆಂಗಳೂರು

ಚಿತ್ರ ಕೃಪೆ: ಇಂಟರ್ನೆಟ್ ತಾಣ