ಹುರುಪುಗಳ ನಡುವೆ
ಹುರುಪುಗಳು ಹಸಿಯಾಗಿ ಹೃದಯದೊಳು ಸೇರಿಹುದು
ಕರಿಭಾವ ತೊರದೆಲೆ ಬೆಳವಣಿಗೆ ಕಂಡಿಹುದು
ಮರೆಯಾಗಿ ಹೋಗದಿರೆ ಸುಮಮನಸ ಹೊಂದಿಹುದು
ಗುರಿಯೊಂದ ತಲುಪುತಲೆ ಬದುಕುತ್ತ ಬಾಳಿಹುದು
***
ಕನಸುಗಳ ನಡುವೆ
ಕನಸುಗಳು ಹುಟ್ಟುವುದು ಚೈತ್ರದಲಿ ನೋಡು
ನನಸಿಂದು ಬರಲೆಂದು ದೇವನಲಿ ಬೇಡು
ಮನವರಳಿ ಕುಣಿಯಲದು ಸವಿಯನ್ನು ಕಾಡು
ತನುವೊಳಗೆ ಬೆರೆಯಲದು ಜೀವನವೆ ಹಾಡು
-ಹಾ ಮ ಸತೀಶ ಬೆಂಗಳೂರು
ಚಿತ್ರ ಕೃಪೆ: ಇಂಟರ್ನೆಟ್ ತಾಣ
ಪ್ರತಿಕ್ರಿಯೆ (0)
ಇನ್ನೂ ಯಾವುದೇ ಪ್ರತಿಕ್ರಿಯೆಗಳಿಲ್ಲ. ಮೊದಲ ಪ್ರತಿಕ್ರಿಯೆ ಮಾಡಿ!