ಕಾಲೆಡವಿ ಕೆಳಗೆ ಬಿದ್ದಾಗ ಪುಟ್ಟ ಗಿಡವೊಂದರ ಸ್ವಗತ ಕಿವಿಗೆ ಕೇಳುವುದಕ್ಕೆ ಆರಂಭವಾಯಿತು. ನೆಲದೊಳಗಿನ ಮಾತುಗಳು ಮನದೊಳಗೆ ತಲುಪಲು ನಾವು ನೆಲಕ್ಕಿಳಿಯಲೇ ಬೇಕಾಗುತ್ತದೆ. ಪುಟ್ಟ ತುಳಸಿ ಗಿಡ ಉಸಿರಾಡಲು ಕಷ್ಟ ಪಡುತ್ತಿದೆ . ಕಾಂಕ್ರೀಟಿನ ಮಧ್ಯೆ ಬಿರುಕು ಬಿಟ್ಟ ಜಾಗದಲ್ಲಿ ಬೇರಿಳಿಸಿ ಬದುಕುವ ಆಸೆ ಹೊಂದಿದೆ. ಅದರ ಮನದ ಅಭಿಲಾಷೆ ಇಷ್ಟೇ, ನಾನು ಇಲ್ಲಿ ಬೇರಿಳಿಸಬಾರದಿತ್ತು, ಬೇರಿಳಿಸುವ ಮೊದಲು ಹಲವು ಬಾರಿಯ ಯೋಚಿಸಿ ನೆಲದಿಂದ ಮೇಲೇಳುವ ಪ್ರಯತ್ನ ಮಾಡಬೇಕಿತ್ತು ನೀರಿಲ್ಲದ ಬೇರಳಿಸಲು ಶಕ್ಯವಿಲ್ಲದ ಸ್ಥಳದಲ್ಲಿ ಅದ್ಭುತವಾದ ಬದುಕಿರುತ್ತೆ ಅನ್ನೋದು ನಿಖರವಿಲ್ಲ. ಇಂದು ನಾಳೆ ಅಲ್ಪ ಸ್ವಲ್ಪ ಹರಿದ ನೀರನ್ನು ಪಡೆದುಕೊಂಡು ಸಾವಿನ ಕಡೆಗೆ ಮುಖ ಮಾಡಲೇಬೇಕು. ಬಿಸಿಲಿಗೆ ಒಣಗಿಯೋ ಕಾಲಿಗೆ ತುಳಿದೋ ಬದುಕಿನ ಕನಸನ್ನ ಕೊನೆಗಾಣಿಸಿಕೊಳ್ಳಲೇಬೇಕು ಹಾಗಾಗಿ ನಾನು ಹೇಳುವುದು ಇಷ್ಟೇ ನಿಮ್ಮ ಬದುಕೆಲ್ಲಿ ಅದ್ಭುತವಾಗಿರುತ್ತೋ ನಿಮ್ಮ ಕನಸುಗಳಿಗೆ ಬೇರಿಳಿಸಲು ಜಾಗ ಸಿಗುತ್ತೋ ಅಲ್ಲಿ ಬದುಕು ಕಟ್ಟಿಕೊಳ್ಳಿ ಇಲ್ಲವಾದರೆ ನನ್ನಂಥಾಗುತ್ತೀರಿ . ತುಳಸಿಯ ಮಾತುಗಳು ಅದರ ಬದುಕಿಂತ ಹೆಚ್ಚಾಗಿ ನನ್ನ ಬದುಕಿಗೆ ದೊಡ್ಡ ಪಾಠವನ್ನೇ ಮಾಡಿಬಿಟ್ಟಿತು
- ಧೀರಜ್ ಬೆಳ್ಳಾರೆ
ಚಿತ್ರ ಕೃಪೆ: ಇಂಟರ್ನೆಟ್ ತಾಣ
ಪ್ರತಿಕ್ರಿಯೆ (0)
ಇನ್ನೂ ಯಾವುದೇ ಪ್ರತಿಕ್ರಿಯೆಗಳಿಲ್ಲ. ಮೊದಲ ಪ್ರತಿಕ್ರಿಯೆ ಮಾಡಿ!