ನಿಮಗೆ ಪರಿಚಯವಿದ್ದರೆ ನಮಗೂ ತಿಳಿಸಿಕೊಡಿ, ನನಗೆ ಅವರ ಅಗತ್ಯ ತುಂಬಾ ಇದೆ. ನಮ್ಮ ಮನೆಗೆ ಚಂದದ ಬಣ್ಣ ಹಚ್ಚುವವರು ಬೇಕಾಗಿದ್ದಾರೆ .ಮನಸ್ಸಿಗೆ ಒಪ್ಪುವ ಬಣ್ಣ ಹಚ್ಚಿ ನೋಡುಗರೆಲ್ಲರನ್ನ ಮನಸುರೆಗೊಳ್ಳುವಂತಹ ಬಣ್ಣ ಬೇಕು. ನನ್ನ ಮನಸ್ಸಲ್ಲಿ ಉಂಟಾಗುವ ಏಕಾಂತಕ್ಕೆ ನೋವಿಗೆ ದಿನದಲ್ಲಿ ಬದಲಾಗುತ್ತಿರುವ ಬಣ್ಣಗಳು ಮನಸ್ಸಿಗೆ ಒಪ್ಪಿಗೆ ಆಗಬೇಕು. ಪ್ರತಿದಿನವೂ ವಿಧವಿಧದ ಬಣ್ಣಗಳನ್ನು ಮನೆಯ ಗೋಡೆಗಳು ಅಲಂಕರಿಸುವಂತಹ ಬಣ್ಣದವರು ಬೇಕು ಅಂತವರ ವಿಳಾಸ ಕೊಡಿ ಇತ್ತೀಚಿಗೆ ಸಮುದ್ರದ ಬಳಿ ಅಲೆಗಳನ್ನು ನೋಡುತ್ತಾ ಇದ್ದಾಗ ಸಮುದ್ರದಂಚಿನ ಆಕಾಶಕ್ಕೆ ಬಣ್ಣವನ್ನು ಬಳಿದವರು ಬೇಕು. ಪ್ರತಿ ದಿನವೂ ಒಂದೊಂದು ಬಣ್ಣಗಳಿಂದ ಆಕಾಶವು ಕಂಗೊಳಿಸುತ್ತಿದೆ ಅದರ ಚಿತ್ತಾರಕ್ಕೆ ಮನಸ್ಸು ಸಂಭ್ರಮಗೊಳ್ಳುತ್ತದೆ, ಹೊಸತನ್ನ ಮಾಡುವುದಕ್ಕೆ ಪ್ರೇರೇಪಿಸುತ್ತದೆ. ಬಣ್ಣಗಳಿಂದ ನನ್ನ ಬದುಕಲ್ಲಷ್ಟು ಬದಲಾವಣೆ ಆಗುವಾಗ ನನ್ನ ಮನೆಯೊಳಗಿನ ಗೋಡೆಯ ಸಿಂಗಾರದ ಬಣ್ಣವೂ ಹಾಗೇ ಬದಲಾಗುವಂತಿದ್ದರೆ ನನ್ನಲ್ಲೂ ಹೊಸ ಉತ್ಸಾಹ ಸಿಕ್ತಾ ಇತ್ತು ದಯವಿಟ್ಟು ಅವರ ವಿಳಾಸವಿದ್ದರೆ ಹುಡುಕಿ ಕೊಡುವಿರಾ?

- ಧೀರಜ್ ಬೆಳ್ಳಾರೆ                                  

ಚಿತ್ರ ಕೃಪೆ: ಇಂಟರ್ನೆಟ್ ತಾಣ