ನಾನೆ ಎನುವ ಭಾವವೇಕೆ ಪ್ರೀತಿಯೆನುವೆ ಒಲವೆ

ಬಾನ ನಡುವೆ ತೇಲಿಯಿರುವ ಚಂದ್ರನೆನುವೆ ಒಲವೆ

 

ಮನದ ಮೂಲೆಯಲ್ಲಿ ತಾಳ ತಪ್ಪಿತೇಕೆ ಇಂದು

ತನುವು ಮುರುಟಿ ಬಾಡದಿಂದು ತಬ್ಬುಯೆನುವೆ ಒಲವೆ

 

ಬೆಟ್ಟ ಗುಡ್ಡದೊಳಗೆ ಸದ್ದು ಎನಿತು ಕೇಳಿ ಆಯಿತು

ಚಿತ್ತ ಕದಡಿ ಹೋಗದಿಂದು ಚಿನ್ನವೆನುವೆ ಒಲವೆ

 

ಸೌಮ್ಯ ಇರದ ತಾಣದಲ್ಲಿ ಸುಖವು ಇರಲು ಸಾಧ್ಯವೆ

ಸುಮವು ಬಿರಿದ ರೀತಿ ನಲಿವೆ ಭಾವವೆನುವೆ ಒಲವೆ

 

ಪುರುಷ ತತ್ವ ಎದ್ದು ಬರಲು ಸವಿಯ ನುಡಿದ ಈಶ

ಕರುಣೆ ಇರುವ ಭೂಮಿಯೊಳಗೆ ಮೋಹವೆನುವೆ ಒಲವೆ

 

-ಹಾ. ಮ ಸತೀಶ ಬೆಂಗಳೂರು

ಚಿತ್ರ ಕೃಪೆ: ಇಂಟರ್ನೆಟ್ ತಾಣ