ಕೆಲಸವನ್ನು ಕಳೆದುಕೊಂಡು ಮನೆಯ ಹೊರಗೆ ಜಗಲಿಯಲ್ಲಿ ಮುಂದೇನು ಮಾಡುವುದು? ಬದುಕೊಂದು ಕೊನೆಯ ನಿಲ್ದಾಣಕ್ಕೆ ಬಂದು ನಿಂತುಬಿಟ್ಟಿದೆ. ಜೀವನ ಸಾಗಿಸುವುದು ಕಷ್ಟ ನಂಬಿದವರಿಗೆ ಮೋಸ ಮಾಡುವುದಕ್ಕಿಂತ ಸಾವನ್ನ ಆರಿಸಿಕೊಳ್ಳುವುದು ಎನ್ನುವ ನಿರ್ಧಾರಕ್ಕೆ ರಂಜಿತ್ ಬಂದುಬಿಟ್ಟಿದ್ದ. ಆ ದಿನ ಮನೆಯಂಗಳದ ಮುಂದೆ ಹಕ್ಕಿಗಳು ಗೂಡು ಕಟ್ಟುವುದಕ್ಕೆ ಶುರು ಮಾಡಿದ್ದು, ಆ ಹಿಂದೆ ಅದೇ ಹಕ್ಕಿಗಳು ಮರದ ಮೇಲೊಂದು ಗೂಡು ಕಟ್ಟುವುದಕ್ಕೆ ಶುರು ಮಾಡಿದ್ದವು ಇದ್ದ ಎರಡು ಮೊಟ್ಟೆಗಳ ಜೊತೆ ಜೋರು ಗಾಳಿಗೆ ಕೆಳಗೆ ಬಿದ್ದು ಎಲ್ಲವನ್ನು ಕಳೆದುಕೊಂಡಿದ್ದರು. ಅದೇ ಮರದ ಇನ್ನೊಂದು ತುದಿಯಲ್ಲಿ ಮತ್ತೆ ಕೊಡು ಕಟ್ಟುವ ಕೆಲಸ ಆರಂಭವಾಗಿತ್ತು. ಆದರೆ ಗಾಳಿಗೆ ಸಿಟ್ಟು ಹೆಚ್ಚಾಗಿತ್ತು. ಮತ್ತೆ ಗೂಡು ಮುರಿದುಬಿತ್ತು.
ಈಗ ಮೂರನೇ ಗೂಡನ್ನು ಕಟ್ಟಲು ಅದೇ ಉತ್ಸಾಹದಿಂದ ಅದೇ ಸಂಭ್ರಮದಿಂದ ಕೆಲಸ ಮುಂದುವರಿಸುತ್ತಿವೆ. ಎಷ್ಟೇ ಕಳೆದುಕೊಂಡರು ಬದುಕುವ ಆಸೆ ಕಡಿಮೆಯಾಗಿಲ್ಲ ಸಾಧಿಸುವ ಛಲ ಮಾಯವಾಗಿಲ್ಲ. ಹಕ್ಕಿಗಳು ಗೂಡು ಕಟ್ಟುವುದನ್ನು ಒಂದು ಕ್ಷಣವೂ ಇಲ್ಲವೇ ಮುಂದುವರೆಸಿತ್ತು ಹಕ್ಕಿಗಳು ಕೊಟ್ಟ ಪಾಠ ರಂಜಿತನ ಬದುಕನ್ನ ಬದಲಾಯಿಸುವಂತೆ ಮಾಡಿತು.
- ಧೀರಜ್ ಬೆಳ್ಳಾರೆ
ಚಿತ್ರ ಕೃಪೆ: ಇಂಟರ್ನೆಟ್ ತಾಣ
ಪ್ರತಿಕ್ರಿಯೆ (0)
ಇನ್ನೂ ಯಾವುದೇ ಪ್ರತಿಕ್ರಿಯೆಗಳಿಲ್ಲ. ಮೊದಲ ಪ್ರತಿಕ್ರಿಯೆ ಮಾಡಿ!