ದಾರಿಯಲ್ಲಿ ಬೆಳಕಿತ್ತು, ದಾರಿ ಸಾಗುತ್ತಲೂ ಇತ್ತು, ವೇಗವಿರಲಿಲ್ಲ, ಸ್ಪಷ್ಟತೆ ಇರಲಿಲ್ಲ, ಶಿಸ್ತಿರಲಿಲ್ಲ ಹಾಗಾಗಿ ಎಲ್ಲವೂ ಮುಂದೂಡಲ್ಪಡುತ್ತಿತ್ತು. ಅಮ್ಮನ‌ ಪ್ರಾರ್ಥನೆ ದೇವರಿಗೆ ಕೇಳಿಸಿತು. ಆಕೆಯನ್ಮ ಕಳುಹಿಸಿದರು, ಆಕೆ ಆತನ ಬದುಕಲ್ಲಿ ಏಳು ಹೆಜ್ಜೆಗಳನ್ನಿಟ್ಟು ಬಂದಳು, ನಕ್ಷತ್ರ ತೋರಿಸಿದವಳು ಬದುಕಿಗೆ ಬೆಳಕಾದಳು. ಅವನು‌ ಬದಲಾದ ಎಲ್ಲದರಲ್ಲೂ...ಊರು ಒಪ್ಪಿತು. ಆಕೆ  ಜೀವಕ್ಕಿಂತ ಹೆಚ್ಚಾಗಿ ಪ್ರೀತಿಸುವ ಅವನು ಮಾದರಿಯಾದ. ಆಕೆ ಅವನನ್ನು ಬದಲಾಯಿಸಲಿಲ್ಲ, ಬದುಕನ್ನ ಪರಿಚಯಿಸಿದಳಷ್ಟೆ.

- ಧೀರಜ್ ಬೆಳ್ಳಾರೆ                                  

ಚಿತ್ರ ಕೃಪೆ: ಇಂಟರ್ನೆಟ್ ತಾಣ