ಅವನಿಗೆ ಕಾರ್ಯಕ್ರಮ ನಿಗದಿಯಾಗಿತ್ತು. ಮನೆಯಿಂದ ತರಾತುರಿಯಲ್ಲಿ ಹೊರಟಿದ್ದ ಆ ಕಾರ್ಯಕ್ರಮವನ್ನು ಅವನೇ ನಿಭಾಯಿಸಬೇಕಿತ್ತು. ದೊಡ್ಡ ವೇದಿಕೆಯ ಮೇಲೆ ಊರ ಕೆಲವೊಂದು ಸಾಧಕರನ್ನು ಗುರುತಿಸಿ ಗೌರವಿಸುವ ಕಾರ್ಯ. ಮಹಿಳಾ ದಿನಾಚರಣೆಯ ಕಾರ್ಯಕ್ರಮದ ಆಯೋಜನೆಯನ್ನ ಹೆಗಲಿಗೆರಿಸಿಕೊಂಡು ಊರವರೆಲ್ಲರ ಮೆಚ್ಚುಗೆಗೆ ಪಾತ್ರನಾಗಿದ್ದ. ಆದರೂ ಆತನ ಮನಸೊಳಗೆ ಆ ಕಾರ್ಯಕ್ರಮ ಮಾಡಿದ ನಂತರ ನೆಮ್ಮದಿಯ ಗಾಳಿ ಉಸಿರಾಡಲೇ ಇಲ್ಲ. ಏನೋ ಖಾಲಿತನದ ಭಾವ. ಹಾಗೆ ಮನೆಗೆ ಬಂದವನು ಅಮ್ಮನಿಗೆ ಮನೆ ಕೆಲಸದಲ್ಲಿ ಕೈ ಜೋಡಿಸಿದ ರಾತ್ರಿ ಅಮ್ಮನನ್ನ ಪಕ್ಕದಲ್ಲಿ ಕುಳ್ಳಿರಿಸಿ ಊಟ ಮಾಡಿದ, ಅಮ್ಮನ ಮಡಿಲಲ್ಲಿ ಮಲಗಿಕೊಂಡ ಅಮ್ಮ ನಿದ್ದೆ ಹೋಗುವರೆಗೂ ಕಾದಿದ್ದು ಇಡೀ ಅಡುಗೆಮನೆಯನ್ನು ಸ್ವಚ್ಛಗೊಳಿಸಿ ಅಮ್ಮನ ಮರುದಿನದ ಬೆಳಗಿನ ಕೆಲಸಗಳು ಕಡಿಮೆಯಾಗಿಸಿದ ಕಾರಣ ನೆಮ್ಮದಿಯಲ್ಲಿ ಉಸಿರಾಡುತ್ತಿದ್ದಳು. ಮಗನನ್ನು ಪಕ್ಕದಲ್ಲಿ ಕುಳ್ಳಿರಿಸಿಕೊಂಡು ಆತನ ಹೆಗಲ ಮೇಲೆ ತಲೆ ಇಟ್ಟು ಮಲಗಿದಳು. ಆಗ ಆತನ ಮನಸೊಳಗೆನ ಖಾಲಿತನ ತುಂಬಿತು. ಮಹಿಳಾ ದಿನಾಚರಣೆ ಸಾರ್ಥಕವಾಯಿತು.

- ಧೀರಜ್ ಬೆಳ್ಳಾರೆ                                  

ಚಿತ್ರ ಕೃಪೆ: ಇಂಟರ್ನೆಟ್ ತಾಣ