ನಿನ್ನೆಯವರೆಗೂ ಜೊತೆಗಿದ್ದವರು ಇಂದು ಎಲ್ಲಿದ್ದಾರೆ? ಯಾಕೆ ಇಬ್ರೂ ನನ್ನ ಜೊತೆಗಿಲ್ಲ ಒಬ್ಬಳ ಪಕ್ಕ ನಾನು ಮಲಗಿದ್ದೆ ಅವಳು ಅವಳನ್ನ ಅಮ್ಮ ಅಂತ ಕರೆಯಬೇಕು ಅಂತ ಅನ್ನುತ್ತಿದ್ದಳು, ನನ್ನನ್ನ ಎತ್ತಿ ಆಡಿಸುತ್ತಿದ್ದವರು ಅಪ್ಪನಂತೆ ಆದರೆ ಮೊನ್ನೆ ರಾತ್ರಿ ನನಗೇನೋ ಕುಡಿಯುವುದಕ್ಕೆ ಕೊಟ್ಟರು, ಕುಡಿದು ಮಲಗಿ ಕಣ್ಣು ಬಿಡುವಷ್ಟರಲ್ಲಿ ಅವರಿಬ್ಬರೂ ಕಾಣುತ್ತಿಲ್ಲ. ಯಾರ್ಯಾರೋ ಬಂದು ನನ್ನ ಎತ್ತಿಕೊಳ್ಳುತ್ತಿದ್ದಾರೆ, ನೋಡಿದವರೆಲ್ಲರೂ ಅಯ್ಯೋ ಪಾಪ ಅನ್ನುತ್ತಿದ್ದಾರೆ, ಯಾಕೆ ? ಏನಾಯ್ತು ಗೊತ್ತಿಲ್ಲ ನನ್ನಿಂದ ಅವರಿಗೆ ಏನಾದರೂ ತೊಂದರೆ ಆಗಿದೆಯೋ? ನನ್ನನ್ನ ಬಿಟ್ಟು ಹೋಗಿದ್ದಾರೋ ಗೊತ್ತಿಲ್ಲ ಬರಿ ಪ್ರಶ್ನೆಗಳಷ್ಟೇ ಬದುಕಾಗಿಬಿಟ್ಟಿದೆ. ಇನ್ನು ಮುಂದೆ ಅವರು ನನ್ನ ಭೇಟಿಯಾಗುವುದಿಲ್ವಾ? ನಾನು ಅವರಿಗೆ ಬೇಡವಾಗಿದ್ದೇನಾ ಅಥವಾ ಬದುಕಿಗೆ ಅವರು ಬೇಡವಾಗಿದ್ದಾರಾ? ಹೀಗೆ ಪ್ರಶ್ನೆಗಳಷ್ಟೇ. ನಿನ್ನೆ ನೋಡುವಾಗ ನನ್ನ ಜೊತೆಗಿದ್ದವರ ಭಾವಚಿತ್ರಗಳು ಟಿವಿ ಒಳಗೆ ಪ್ರದರ್ಶನವಾಗುತ್ತಿದೆ. ಅವರು ಉಸಿರು ನಿಲ್ಲಿಸಿದ್ದಾರೆ ಅಂತೆ. ಕಾರಣವೇನು ಉತ್ತರವಿದ್ದರೆ ತಿಳಿಸಿಕೊಡಿ.

- ಧೀರಜ್ ಬೆಳ್ಳಾರೆ                                  

ಚಿತ್ರ ಕೃಪೆ: ಇಂಟರ್ನೆಟ್ ತಾಣ