ಕಾಲನ ಹೊಸ್ತಿಲಲ್ಲಿ ಇದ್ದರೂ, ಅಳುವವರು ಯಾರಿಲ್ಲ ಇಲ್ಲಿ
ಜೀವನದ ಪಾಠವನ್ನು ಕಲಿತೆ, ಬೇರೆಯವರು ಸೇರಿಲ್ಲ ಇಲ್ಲಿ
ಉಂಡಮನೆಗೆ ನನ್ನದೆಲ್ಲವ ಸುರಿದರೂ, ಇಂದು ನೋಡುವರೇ
ಹೃದಯ ಹಿಂಡಿದ ನೋವಿನಲ್ಲಿ, ಚೀರಾಡಿದರೂ ಕೇಳಿಲ್ಲ ಇಲ್ಲಿ
ಆಶ್ರಯದ ಜಲವ ಕುಡಿದು, ಬದುಕುತ್ತಿರುವಂತೆ ನೋಡುತಿಹರು
ಆಶ್ರಮದ ಹೊರಗಡೆ ನಿಂತು, ಕಾಯುತ್ತಿದ್ದರೂ ಬೇಕಿಲ್ಲ ಇಲ್ಲಿ
ಚಿಂತೆಗಳ ಸುಳಿಗೆ ಸಿಲುಕಿದವನಿಗೆ, ಅನ್ನನೀಡದೆ ಹೋಗುವರೆ
ಉಟ್ಟಬಟ್ಟೆಯಲ್ಲೆ ಹೊರಟಿದ್ದೆ, ಹೊರಗೆ ಅವರಿಗೂ ಸಾಕಲ್ಲ ಇಲ್ಲಿ
ಬಾಳಿನ ಏಳುಬೀಳುಗಳಲ್ಲಿ ಒಬ್ಬಂಟಿ, ನಾನು ತಿಳಿಯಲೇ ಇಲ್ಲ ಈಶ
ಹೊರಡುವ ಕಾಲ ಹತ್ತಿರ ಬಂದಿದೆಯೆಂದು, ಯಾರೂ ಕಚ್ಚಿಲ್ಲ ಇಲ್ಲಿ
-ಹಾ ಮ ಸತೀಶ ಬೆಂಗಳೂರು
ಪ್ರತಿಕ್ರಿಯೆ (0)
ಇನ್ನೂ ಯಾವುದೇ ಪ್ರತಿಕ್ರಿಯೆಗಳಿಲ್ಲ. ಮೊದಲ ಪ್ರತಿಕ್ರಿಯೆ ಮಾಡಿ!