ಹುಡಿಯಾಗಿದೆ ಬದುಕು

ಸಿಡಿಲಾಗುತ ನೆಲವು 

ರಕುತ ಹೊಳೆಯದು ಹರಿದು ಬಡಿದಾಡುತ 

 

ಮನಸು ಕದಡಿದವರೆ 

ಹೀಗೆ ಬಡಿದಾಡುತ 

ಮರೆಯಲ್ಲಿ ನಿಂತು ಕುಲವ ಕೆಡಿಸುತಲಿ 

 

ಯುದ್ಧ ಮಾಡುವರಾರೋ

ಸುಸ್ತು ಹೊಡೆದವರಾರೋ

ಗಂಡೆದೆಯ ಗುಂಡಿಗೆಯ ಒಡೆದವರು ಯಾರೋ 

 

ಹೊತ್ತಿ ಉರಿದವರಾರೋ 

ಬದುಕು ಸೋತವರಾರೋ 

ಬಾಳಿನಲಿ ನರನರಳಿ ಸತ್ತವರು ಯಾರೋ

 

ಜಗದಗಲ ಬೆಳಕಿಲ್ಲ 

ಹೊಗೆ ಮೋಡ ಬಾನು

ಉಸಿರಿರದ ಜೀವನದಿ ಕೆಸರು ತುಂಬಿದ ಜಲವು 

 

ರೊಚ್ಚಿಗೇಳುವ ಮೊದಲು 

ಯುದ್ದ ನಿಲ್ಲಿಸಿ ಭವದಿ 

ಸವಿಯಿರುವ ಜನಮನವ ಕೊಚ್ಚೆ ಮಾಡದಿರಿ ಛಲದಿ 

 

-ಹಾ. ಮ ಸತೀಶ ಬೆಂಗಳೂರು

ಚಿತ್ರ ಕೃಪೆ: ಇಂಟರ್ನೆಟ್ ತಾಣ