ಅವನಿಗೆ ಸಿಟ್ಟು ಮೂಗಿನ ತುದಿಯಲ್ಲಿ.ಮನೆಯಲ್ಲಿ ಅಮ್ಮನಿಗೆ ಅದೇ ಚಿಂತೆ.ಪ್ರತೀ ಸಲವೂ ಶಾಲೆ, ಕಾಲೇಜಿನಿಂದ ಕರೆ ಬರುತ್ತಲೇ ಇತ್ತು “ನಿಮ್ಮ ಮಗ ಮತ್ತೆ ಜಗಳ ಮಾಡಿಕೊಂಡಿದ್ದಾನೆ…”ಆದರೂ ಒಂದು ನೆಮ್ಮದಿ ಇತ್ತು. ಅವನ ತಪ್ಪಿದ್ದರೆ ಯಾವತ್ತೂ ಎದುರು ಮಾತಾಡುವುದಿಲ್ಲ. ತಲೆಬಾಗಿ ನಿಂತುಕೊಳ್ಳುತ್ತಾನೆ.
ಆದರೆ ತಪ್ಪಿಲ್ಲದಾಗ? ಅವನು ಮಾತನ್ನ ನಿಲ್ಲಿಸಲಾರ. ನ್ಯಾಯಕ್ಕಾಗಿ ಯಾರೇ ಇರಲಿ ಎದುರು ನಿಂತು ಮಾತಾಡುತ್ತಾನೆ. ಅಮ್ಮನ ಮನಸ್ಸಿನಲ್ಲಿ ಯಾವಾಗಲೂ ಒಂದೇ ಪ್ರಶ್ನೆ —ಇವನ ಈ ಗುಣ… ಒಳಿತಿನ ಕಡೆಗೋ? ಕೆಡುಕಿನ ಕಡೆಗೋ?”
ಒಂದು ದಿನ…ಕಾಲೇಜಿನಿಂದ ಮತ್ತೆ ಕರೆ. ಈ ಬಾರಿ ವಿಷಯ ಗಂಭೀರ. ಒಬ್ಬ ಬಡ ಹುಡುಗನನ್ನು ಕೆಲವರು ಕಿರುಕುಳ ಕೊಡುತ್ತಿದ್ದರು. ಅವನು ಸಹಿಸಿಕೊಳ್ಳದೆ ಎದುರು ನಿಂತಿದ್ದ. ಜಗಳ ದೊಡ್ಡದಾಯಿತು. ಕಾಲೇಜು ಅಧಿಕಾರಿಗಳು ಅವನನ್ನೇ ತಪ್ಪುಗಾರನೆಂದು ತೀರ್ಮಾನಿಸಿದರು. ಅಮ್ಮ ಆತಂಕದಿಂದ ಕಾಲೇಜಿಗೆ ಬಂದರು.“ಇವನೇ ಸದಾ ಸಮಸ್ಯೆ ತರ್ತಾನೆ…” ಎಂದು ಕೇಳಿದ ಮಾತುಗಳು ಮನಸ್ಸಿಗೆ ಚುಚ್ಚಿದವು.
ನನ್ನ ಜೊತೆಗೆ ನೋವಿನಲ್ಲಿ ನಿಂತದ್ದೇ ನಿಮ್ಮ ಮಗ. ಅಮ್ಮ ಮೌನವಾದರು. ಅವನ ಕಡೆ ನೋಡಿದರು. ಅವನು ಎಂದಿನಂತೆ ತಪ್ಪಿಲ್ಲದ ದೃಢತೆ, ಕಣ್ಣಿನಲ್ಲಿ ಸತ್ಯ. ಆ ಕ್ಷಣ ಅಮ್ಮನ ಮನಸ್ಸಿನಲ್ಲಿ ಉತ್ತರ ಸಿಕ್ಕಿತು. ಸಿಟ್ಟು ಮೂಗಿನ ತುದಿಯಲ್ಲಿ ಇದ್ದರೂ…ಹೃದಯ ಸರಿಯಾದ ಕಡೆ ಇತ್ತು.
- ಧೀರಜ್ ಬೆಳ್ಳಾರೆ
ಚಿತ್ರ ಕೃಪೆ: ಇಂಟರ್ನೆಟ್ ತಾಣ
ಪ್ರತಿಕ್ರಿಯೆ (0)
ಇನ್ನೂ ಯಾವುದೇ ಪ್ರತಿಕ್ರಿಯೆಗಳಿಲ್ಲ. ಮೊದಲ ಪ್ರತಿಕ್ರಿಯೆ ಮಾಡಿ!