ಯಾತಕ್ಕೆ ಮಳೆ
ಯಾತಕ್ಕೆ ಮಳೆ ಹೋದವೋ ಶಿವ ಶಿವ
ಲೋಕ ತಲ್ಲಣಿಸುತಾವೋ
ಬೇಕಿಲ್ಲದಿದ್ದರೆ ಬೆಂಕಿಯ ಮಳೆ ಸುರಿದು
ಉರಿಸಿಕೊಲ್ಲಲುಬಾರದೆ ॥
ಹೊಟ್ಟಿಗೆ ಅನ್ನ ಇಲ್ಲದೆಲೆ ।
ನಡೆದಾರೆ ಜೋಲಿ ಹೊಡೆಯುತಲೆ
ಪಟ್ಟದಾನೆಂಥ ಸ್ತ್ರೀಯರು ಸೊರಗಿ
ಸೀರೆ ನಿಲ್ಲೋದಿಲ್ಲ ಸೊಂಟದೆಲೆ ॥
ಹಸುಗೂಸು ಹಸಿವಿಗೆ ತಾಳದೆಲೆ
ಅಳುತಾವೆ ರೊಟ್ಟಿ ಕೇಳುತಲೆ
ಹಡೆದ ಬಾಣಂತಿಗೆ ಅನ್ನಾವು ಇಲ್ಲದೆರೆ
ಏರುತಾವೆ ಮೊಳಕೈಗೆ ಬಳೆ ॥
ಒಕ್ಕಲು ಮಕ್ಕಳಂತೆ ಅವರಿನ್ನು
ಮಕ್ಕಳನು ಮಾರುಂಡರು
ಮಕ್ಕಳನು ಮಾರುಡ ದುಃಖವನ ಮಾಡ್ತಾರೆ
ಮುಕ್ಕಣ್ಣ ಮಳೆ ಕರುಣಿಸೋ ॥
(‘ಗಾನ ವಿಜ್ಞಾನ ಚೇತನ’ ಕೃತಿಯಿಂದ ಸಂಗ್ರಹಿತ)
ಪ್ರತಿಕ್ರಿಯೆ (0)
ಇನ್ನೂ ಯಾವುದೇ ಪ್ರತಿಕ್ರಿಯೆಗಳಿಲ್ಲ. ಮೊದಲ ಪ್ರತಿಕ್ರಿಯೆ ಮಾಡಿ!