ಗಾನ ವಿಜ್ಞಾನ ಚೇತನ ಕೃತಿಯಿಂದ ಈ ವಾರ ಒಂದು ಖ್ಯಾತ ಜನಪದ ಗೀತೆಯನ್ನು ಆರಿಸಿ ಪ್ರಕಟಿಸಲಾಗಿದೆ.
ಬಿದಿರಮ್ಮ ತಾಯೇ ಕೇಳೇ
ಬಿದಿರಮ್ಮ ತಾಯಿ ಕೇಳೇ
ನೀನಾರಿಗಲ್ಲವಳೇ
ಬಿದಿರಮ್ಮ ತಾಯೆ ಕೇಳೆ ॥
ಹುಟ್ಟುತ್ತ ಹುಲ್ಲಾದೆ ಬೆಳೆಯುತ್ತ ಬಿದಿರು ಆದೆ
ಬೆಟ್ಟಾದ ಕೆಳಗೆ ಇದ್ದೆ ಅದರುದ್ಧ ಬೆಳೆದಿದ್ದೆ ॥
ರಂಗನಿಗೆ ಕೊಳಲು ಆದೆ ಕಂದನಿಗೆ ತೊಟ್ಟಿಲಾದೆ
ಆಡುವ ಮಕ್ಕಳಿಗೆ ಓಡೂವ ಕುದುರೆಯಾದೆ ॥
ಮದುವೇಯ ಹಂದರಕ್ಕೆ ಚಪ್ಪರದ ಕಂಬವಾದೆ
ಮೈದುಬುಂವ ಕುಣಿತಕ್ಕೆ ನಂದೀಯ ಕೋಲು ಆದೆ ॥
ಊರೂರ ಸೂರು ಆದೆ ಕೂರಿಗೆಯ ಕೊಳವೆಯಾದೆ
ನಮ್ಮಜ್ಜ ನಡೆಯಲಿಕ್ಕೆ ನೀ ಊರುಗೋಲು ಆದೆ ॥
ಧಾನ್ಯಗಳ ಕೇರುವಂಥ ಮುತ್ತಿನ ಮರವು ಆದೆ
ಕಾಳುಗಳ ಕೂಡಿ ಇಡಲು ಕಟ್ಟೀದ ಕಣಜವಾದೆ ॥
ಅಂಬಿಗಗೆ ಹುಟ್ಟು ಆದೆ ಮ್ಯಾದಾರ್ ಗೆ ಬುಟ್ಟಿಯಾದೆ
ಹತ್ತುವವಗೆ ಏಣಿಯಾದೆ ಸತ್ತವಗೆ ಚಟ್ಟವಾದೆ ॥
(ಗಾನ ವಿಜ್ಞಾನ ಚೇತನ ಕೃತಿಯಿಂದ ಸಂಗ್ರಹಿತ)
ಪ್ರತಿಕ್ರಿಯೆ (0)
ಇನ್ನೂ ಯಾವುದೇ ಪ್ರತಿಕ್ರಿಯೆಗಳಿಲ್ಲ. ಮೊದಲ ಪ್ರತಿಕ್ರಿಯೆ ಮಾಡಿ!