ನೋಡಿ
ಮನೆಯೊಳಗೇ
ಪೊರಕೆಗಳು ಇವೆ
ಒಂದು ಕಾಲಿನವು
ಗುಡಿಸುತ್ತವೆ
ಎರಡು ಕಾಲಿನವು
ಒದ್ದು ಓಡಿಸುತ್ತವೆ !
*
ನಾನೇ
ಎನ್ನುವುದಕ್ಕೂ
ನಾನೆ
ಅನ್ನುವುದಕ್ಕೂ
ವ್ಯತ್ಯಾಸವಿದೆ !
ಸಿಹಿ
ಕಹಿಯ
ಜೀವನದ
ಹಾಗೆ !
*
ಮನುಜನ
ಜೀವನದೇಳಿಗೆ
ಕಲಿಕೆಯ ಉದ್ಧೇಶ
ಬರಹದ್ದಾಗಿರಲಿ,
ಹೊರತು
ಇನ್ನೊಬ್ಬರನ್ನು
ದೂಷಿಸುತ್ತಾ
ತಮಾಷೆಯಾಗದಿರಲಿ !
*
ಉಸಿರು
ಬೇಕೆಂದರೆ
ನಲ್ಲಿಯಲ್ಲಿ
ಬರುವ
ನೀರನ್ನಾದರೂ
ಕುಡಿದು
ಕೊಂಡು
ದೊಡ್ಡವರಿಗೆ
ಜೈ ಹೊ
ಎನ್ನುತ್ತಿರಬೇಕು !
*
ಸ್ಪಷ್ಟತೆ
ಇಲ್ಲ
ದ
ದಾನಗಳು
ತಾಳೆ
ಮರದ
ಕೆಳಗೆ
ಕುಳಿತು
ಮಜ್ಜಿಗೆ
ಕುಡಿದಂತೆ !
*
ತಪ್ಪು ತಪ್ಪು
ನಡೆಯ ಜೊತೆಗೆ
ಸಾಗ ಬೇಡ ಎಂದಿಗು
ಒಪ್ಪನೊಪ್ಪು
ಬದುಕಿನೊಳಗೆ
ಸವಿಯ ಗಳಿಸು ಮುಂದೆಗು
*
ಉದಯ ರವಿಯ
ನೋಡುವಾಗ
ಅವನ ಹಾಗೆ ಆಗುವೆ
ಮನದಿ ಎಣಿಸು
ದಿನದ ಸಮಯ
ಬಾಳ ರಥದೆ ಸಾಗುವೆ
*
ಹರುಷ ಇಹುದು
ಸುಖದ ಕಡಲು
ಹರಸಿ ಇರಲು ಹಿತವದು
ಪ್ರೀತಿ ಪ್ರೇಮ
ಬಂಡಿ ಚಕ್ರ
ಮುಂದೆ ಪಯಣ ಒಲವದು
*
ಮರೆತು ಬಿಡಲು
ಹಿಂದಿನದನು
ಬರುವ ಕಾಲ ಚಂದವು
ಹೀಗೆ ಮೋಹ
ಎಳೆದು ತರಲು
ಜೀವ ಕಾವ ಬಂಧವು
*
ಇಲ್ಲೊಬ್ಬ ಮಂತ್ರಿ
ಹಸಿರು ಶಾಲು ಧರಿಸಿ
ಚುನಾವಣೆಗೆ ನಿಂತು
ಜಯಘೋಷವಾಗಿಸಿ,
ಕೋಟ್ಯಾಧಿಪತಿಯಾದ !
ಮತ್ತೊಬ್ಬ ಸಾಮಾನ್ಯ ರೈತ
ಹಸಿರು ಶಾಲು ಧರಿಸುತಲೆ,
ಸಾಲಗಳ ಹೊರೆಯಿಂದ
ಹೊರ ಬರಲಾಗದೆ
ಮಸಣ ಸೇರಿದ !!
-ಹಾ.ಮ ಸತೀಶ ಬೆಂಗಳೂರು
ಚಿತ್ರ ಕೃಪೆ: ಇಂಟರ್ನೆಟ್ ತಾಣ
ಪ್ರತಿಕ್ರಿಯೆ (0)
ಇನ್ನೂ ಯಾವುದೇ ಪ್ರತಿಕ್ರಿಯೆಗಳಿಲ್ಲ. ಮೊದಲ ಪ್ರತಿಕ್ರಿಯೆ ಮಾಡಿ!