ಅವನನ್ನು ಮರೆಯುವುದಕ್ಕೆ ಸಾಧ್ಯವಾಗ್ತಾ ಇಲ್ಲ ಅವನು ತುಂಬಾ ಜೊತೆಗಾರರಿಗೆ ಪ್ರೀತಿ ಹಂಚಿದ್ದ ನಗುವನ್ನು ತುಂಬಿಕೊಂಡಿದ್ದ, ಸಹಾಯ ಮಾಡುವುದಕ್ಕೆ ಮುಂದೆ ಬರ್ತಾ ಇದ್ದ. ಆ ದಿನ ಬೈಕ್ ಸ್ವಲ್ಪ ವೇಗವನ್ನ ಹೆಚ್ಚಿಸಿಕೊಂಡ ಕಾರಣ ಆ ತಿರುವಿನಲ್ಲಿ ಬಡಿದು ಆತ ಕ್ಷಣದಲ್ಲೇ ಕೊನೆ ಉಸಿರುಳೆದಿದ್ದ. ಈ ದಿನ ಆತ ಎಲ್ಲರ ಪ್ರೀತಿಯ ಗೆಳೆಯನಾಗಿದ್ದಾನೆ ಆತನನ್ನ ಪ್ರತಿಯೊಬ್ಬರು ಕಳೆದುಕೊಂಡ ನೋವಿನಲ್ಲಿದ್ದಾರೆ ಆತ ವೇಗವನ್ನ ತಗ್ಗಿಸಬಹುದಿತ್ತು. ತನ್ನ ಮನೆಯವರ ನೆನಪಾಗಬೇಕಿತ್ತು, ಈಗ ಪ್ರತಿಯೊಬ್ಬರು ನಿಧಾನವಾಗಿ ಚಲಿಸುವುದಕ್ಕೆ ಎಲ್ಲರಲ್ಲಿಯೂ ಕೇಳಿಕೊಳ್ಳುತ್ತಿದ್ದಾರೆ ಆದರೆ ಅವರು ಯಾರು ಅವನ ಬಳಿ ಒಂದು ದಿನವೂ ಹೇಳಲೇ ಒಲ್ಲ ಆತನ ಕನಸುಗಳೆಲ್ಲವೂ ಅಲ್ಲೇ ಚೂರು ಚೂರಾಗಿದೆ. ಕಳೆದುಕೊಂಡದ್ದು ಮರಳಿ ಬರುವುದಿಲ್ಲ. ಸಣ್ಣ ವೇಗ ಸಾವನ್ನ ಬೇಗ ತರುತ್ತದೆ. ಅವನ ಮನೆಯ ದೀಪ ಆರಿದೆ,ಅಪ್ಪ-ಅಮ್ಮನ ಕಣ್ಣಲ್ಲಿ ಕನಸುಗಳು ಮುಳುಗಿ ಕಣ್ಣೀರು ಇಳಿಯುತ್ತಿದೆ, ಗೆಳೆಯರ ಮನಸ್ಸಲ್ಲಿ ನೆನಪಿದೆ, ಒಂದಷ್ಟು ಜನ ನೋಡಿದ್ದಾರೆ ನೋವು ಪಟ್ಟಿದ್ದಾರೆ ಮರೆತು ಮುಂದೆ ಚಲಿಸುತ್ತಾರೆ. ಗಾಡಿಯ ವೇಗದ ಬಗ್ಗೆ ನಿಯಂತ್ರಣವಿರಲಿ.
- ಧೀರಜ್ ಬೆಳ್ಳಾರೆ
ಚಿತ್ರ ಕೃಪೆ: ಇಂಟರ್ನೆಟ್ ತಾಣ
ಪ್ರತಿಕ್ರಿಯೆ (0)
ಇನ್ನೂ ಯಾವುದೇ ಪ್ರತಿಕ್ರಿಯೆಗಳಿಲ್ಲ. ಮೊದಲ ಪ್ರತಿಕ್ರಿಯೆ ಮಾಡಿ!