ತಾರಾನಾಥ ವರ್ಕಾಡಿ ಸಂಪಾದಕತ್ವದ "ಬಲ್ಲಿರೇನಯ್ಯ"
ಉಡುಪಿ ಜಿಲ್ಲೆ ಕಾರ್ಕಳ ತಾಲೂಕು ಬೆಳ್ಮಣ್ಣುವಿನ ಡಾ. ಪ್ರೇಮಲತಾರವರು ಮಾಲಕರು, ಪ್ರಕಾಶಕರು ಮತ್ತು ವ್ಯವಸ್ಥಾಪಕರಾಗಿರುವ ಹಾಗೂ ಖ್ಯಾತ ಲೇಖಕ, ವಿಮರ್ಶಕರಾದ ತಾರಾನಾಥ ವರ್ಕಾಡಿಯವರು ಸಂಪಾದಕರಾಗಿರುವ ಯಕ್ಷಗಾನ ಕ್ಷೇತ್ರಕ್ಕೆ ಮೀಸಲಾದ ಮಾಸಪತ್ರಿಕೆಯಾಗಿದೆ. "ಇದು ಯಕ್ಷಲೋಕದ ಗೆಳೆಯ ಗೆಳತಿಯರ ಭಾವನೆಗಳ ರಂಗಸ್ಥಳ" ಎಂಬ ಉಪಶೀರ್ಷಿಕೆಯೊಂದಿಗೆ ೨೦೧೩ರ ಫೆಬ್ರವರಿಯಲ್ಲಿ ಆರಂಭವಾದ "ಬಲ್ಲಿರೇನಯ್ಯ", ಕಳೆದ ೧೩ ವರ್ಷಗಳಿಂದ ನಿರಂತರವಾಗಿ ಪ್ರಕಟಗೊಳ್ಳುತ್ತಿದೆ.
ಬೆಳ್ಮಣ್ಣು - ಪಡುಬಿದ್ರಿ ರಸ್ತೆಯ ಪೆಟ್ರೋಲ್ ಪಂಪ್ ಬಳಿಯ ಪಂಚರತ್ನ ಕಾಂಪ್ಲೆಕ್ಸ್ ನಲ್ಲಿ ಕಚೇರಿ ಹೊಂದಿರುವ ಆಜ್ಞಾಸೋಹಮ್ ಪ್ರಕಾಶನದ ಮೂಲಕ, ೩೬ ಪುಟಗಳಲ್ಲಿ ಪುಸ್ತಕ ರೂಪದಲ್ಲಿ ಬಹುವರ್ಣಗಳೊಂದಿಗೆ ಹೊರಬರುತ್ತಿರುವ "ಬಲ್ಲಿರೇನಯ್ಯ", ಕಿನ್ನಿಗೋಳಿಯ ಕೆ. ಸಚ್ಚಿದಾನಂದ ಉಡುಪ ಅವರ ಅನಂತ ಪ್ರಕಾಶದಲ್ಲಿ ಮುದ್ರಣವಾಗುತ್ತಿದೆ.
ಪತ್ರಿಕೆಯ ಬಿಡಿ ಸಂಚಿಕೆಯ ಬೆಲೆ ೨೦ ರೂಪಾಯಿ. ವಾರ್ಷಿಕ ಚಂದಾ ಮೊತ್ತ ೨೫೦ ರೂಪಾಯಿ, ಎರಡು ವರ್ಷಕ್ಕೆ ೫೦೦ ರೂಪಾಯಿ, ಐದು ವರ್ಷಗಳಿಗೆ ಒಂದು ಸಾವಿರ ರೂಪಾಯಿ, ಆಜೀವ ಸದಸ್ಯತ್ವ ಎರಡು ಸಾವಿರ ರೂಪಾಯಿ, ಪೋಷಕರಾಗಲು ೫ ಸಾವಿರ ರೂಪಾಯಿ ಮತ್ತು ಮಹಾಪೋಷಕತ್ವ ೧೦ ಸಾವಿರ ರೂಪಾಯಿಗಳಾಗಿವೆ. "ಬಲ್ಲಿರೇನಯ್ಯ" ದಲ್ಲಿ ಯಕ್ಷಗಾನ ಸಂಬಂಧವಾದ ಲೇಖನ, ವಿಮರ್ಶೆ, ವಿಶ್ಲೇಷಣೆ, ಅವಲೋಕನ, ವರದಿಗಳು, ಸಂದರ್ಶನ, ಹಿಮ್ಮೇಳ ಮುಮ್ಮೇಳ ಕಲಾವಿದರ ಪರಿಚಯ, ಪ್ರಸಂಗ ಪರಿಚಯ, ಪ್ರಶ್ನೋತ್ತರ ಇತ್ಯಾದಿಗಳು ಪ್ರಕಟವಾಗುತ್ತವೆ.
~ ಶ್ರೀರಾಮ ದಿವಾಣ
ಪ್ರತಿಕ್ರಿಯೆ (0)
ಇನ್ನೂ ಯಾವುದೇ ಪ್ರತಿಕ್ರಿಯೆಗಳಿಲ್ಲ. ಮೊದಲ ಪ್ರತಿಕ್ರಿಯೆ ಮಾಡಿ!