ಅವಳು ಮೌನವಾಗಿದ್ದಾಳೆ. ಮಾತು ಬಾರದ ಕಾರಣಕ್ಕಲ್ಲ... ಮಾತು ನಂಬಿಕೆ ಕಳೆದುಕೊಂಡ ಕಾರಣಕ್ಕೆ.ಒಂದು ಕಾಲದಲ್ಲಿ ಅವಳು ಮಾತನಾಡುತ್ತಿದ್ದಳು.ಅನ್ಯಾಯ ಕಂಡಾಗ ಪ್ರಶ್ನಿಸುತ್ತಿದ್ದಳು. ಆದರೆ ಒಂದು ಘಟನೆ ಅವಳೊಳಗಿನ ಧ್ವನಿಯನ್ನೇ ಕೊಂದು ಹಾಕಿತು.

ಒಂದು ಊರು. ಅಲ್ಲಿ ಒಂದು ಪಕ್ಷಿಯನ್ನು ಗಾಯಗೊಳಿಸಿದವನನ್ನು ಪೊಲೀಸರು ಹಿಡಿದುಕೊಂಡರು. ಇದು ರಾಷ್ಟ್ರಪಕ್ಷಿ, ಇದಕ್ಕೆ ತೊಂದರೆ ಕೊಟ್ಟರೆ ಕಠಿಣ ಶಿಕ್ಷೆ!" ಜನರು ಸಂತೋಷಪಟ್ಟರು - "ನ್ಯಾಯ ಸಿಕ್ಕಿತು" ಎಂದು.ಅದೇ ಊರಿನಲ್ಲಿ, ಒಂದು ಹೆಣ್ಣಿನ ಜೀವವನ್ನು ಕಿತ್ತುಕೊಂಡವನೂ ಇದ್ದ. ಅವಳ ಕಿರುಚಾಟ ಗಾಳಿಯಲ್ಲಿ ಕರಗಿತು.

ಆದರೆ ನ್ಯಾಯಾಲಯದಲ್ಲಿ ಆ ಕಿರುಚಾಟಕ್ಕೆ ಸಾಕ್ಷಿ ಸಿಕ್ಕಲಿಲ್ಲ."ಸಾಕ್ಷಿ ಕೊರತೆ..."ವಯಸ್ಸಿನ ಕಾರಣ..."ಸಂದೇಹದ ಲಾಭ..." ಎಲ್ಲಾ ಕಾರಣಗಳು ಸಾಲಾಗಿ ನಿಂತವು.ಅವನಿಗೆ ಜಾಮೀನು ಸಿಕ್ಕಿತು.ಅವನು ಹೊರಗೆ ತಲೆಯೆತ್ತಿ ನಡೆಯುತ್ತಿದ್ದ.ಅವಳು ನೋಡುತ್ತಿದ್ದಳು.ಅವಳೊಳಗೆ ಪ್ರಶ್ನೆ ಕಿರುಚುತ್ತಿತ್ತು -ಪಕ್ಷಿಯ ನೋವು ರಾಷ್ಟ್ರದ ನೋವಾಯ್ತು... ಆದರೆ ನನ್ನ ನೋವು ಯಾರದ್ದು?"ಅವಳು ಮಾತಾಡಲಿಲ್ಲ.

ಏಕೆಂದರೆ ಅವಳು ಅರಿತುಕೊಂಡಿದ್ದಳು. ಈ ಸಮಾಜದಲ್ಲಿ ಕೆಲ ಧ್ವನಿಗಳಿಗೆ ಮಾತ್ರ ಮೈಕ್ ಸಿಗುತ್ತದೆ, ಮತ್ತೊಂದು ಧ್ವನಿ ಮೌನದಲ್ಲೇ ಹೂತುಹೋಗುತ್ತದೆ "ನ್ಯಾಯ ಎಂದರೆ ಶಿಕ್ಷೆ ಅಲ್ಲನ್ಯಾಯ ಎಂದರೆ ಭಯ."ಒಬ್ಬ ತಪ್ಪು ಮಾಡಿದಾಗ, ಇನ್ನೊಬ್ಬನು ಅದನ್ನ ಮಾಡುವ ಮುನ್ನ ಕಂಪಿಸಬೇಕು... ಅದು ನ್ಯಾಯ." ಅವಳ ಕೂಗು ಯಾರಿಗೂ ಇನ್ನೂ ಕೇಳುತ್ತಿಲ್ಲ.

- ಧೀರಜ್ ಬೆಳ್ಳಾರೆ                                  

ಚಿತ್ರ ಕೃಪೆ: ಇಂಟರ್ನೆಟ್ ತಾಣ