ಭಗವಂತನು ಊರನ್ನು ಹುಡುಕುತ್ತಿದ್ದ. ಅವನಿಗೆ ಬೇಕಾಗಿದ್ದು ಭಕ್ತಿಯೂ, ಏಕತೆಯೂ ತುಂಬಿದ ನೆಲೆ.ಅದಾಗಲೇ ಅವನ ಕಣ್ಣಿಗೆ ಕಂಡದ್ದು ಕಟಪಾಡಿಎಲ್ಲರೂ ಒಂದಾಗಿ, ಭಾವೈಕ್ಯತೆಯ ಸಾರುವ, ನೆಮ್ಮದಿಯ ಬೀಡು. “ಇದೇ ನನ್ನ ಸ್ಥಳ...” ಎಂದು ಭಗವಂತನು ತೀರ್ಮಾನಿಸಿದ.ಆತನನ್ನು ಪ್ರೀತಿಯಿಂದ ಬರಮಾಡಿಕೊಳ್ಳುವವರಿಗಾಗಿ ಕಾಯುತ್ತಿದ್ದ.

ಊರ ಹಿರಿಯರು ಕೂಡಲೇ ಸೇರಿ,ಆತನ ಆರಾಧನೆಗೆ ಶುಭ ದಿನವನ್ನು ನಿಗದಿ ಮಾಡಿದರು.ಸುದ್ದಿ ಹರಡಿತು...ಊರಿನ ಹೃದಯದಲ್ಲಿ ಹರ್ಷ ತುಂಬಿತು.ಎಲ್ಲರೂ ಸೇರಿ ಊರನ್ನು ಸಿಂಗರಿಸಿದರು-ಬೀದಿಗಳು ಬೆಳಕಿನಿಂದ ಹೊಳೆಯಿತು, ಮನಗಳು ಭಕ್ತಿಯಿಂದ ತುಂಬಿತು. ಹಿರಿಯರು, ಕಿರಿಯರು... ದೊಡ್ಡವರು, ಸಣ್ಣವರು. ಎಲ್ಲರೂ ಕೈಜೋಡಿಸಿ, ಒಂದೇ ಮನಸ್ಸಿನಿಂದ ಸಿದ್ಧತೆ ನಡೆಸಿದರು. ಅಂತೂ... ಭಗವಂತ ಬಂದನು. ಆತನಿಗೆ ದೊರಕಿದ ಪ್ರೀತಿ, ಭಕ್ತಿ, ಏಕತೆ ನೋಡಿ-ಇಲ್ಲೇ ನನ್ನ ನೆಲೆ...” ಎಂದು ಆಶೀರ್ವದಿಸಿದ ಆ ದಿನದಿಂದ ಕಟಪಾಡಿ ದೈವ ಸಂಕಲ್ಪದಿಂದ ಆಶೀರ್ವದಿಸಲ್ಪಟ್ಟ ಊರಾಯಿತು. ಕಟಪಾಡಿಗೆ ದೈವ ಸಂಕಲ್ಪ ಒಲಿಯಿತು. ಊರಿನವರು ಗೆದ್ದರು.

- ಧೀರಜ್ ಬೆಳ್ಳಾರೆ                                  

ಚಿತ್ರ ಕೃಪೆ: ಇಂಟರ್ನೆಟ್ ತಾಣ