ರಾಯರ ಮನೆಯಲ್ಲಿ ಇಂದು ದೊಡ್ಡ ಕಾರ್ಯಕ್ರಮ.ಮನೆ ತುಂಬಾ ಜನ, ಸದ್ದು, ಸಂಭ್ರಮ... ಆದರೆ ಯಾವುದೋ ಕೊರತೆ. ಹಿಂದೆ ಇಂತಹ ಸಂದರ್ಭಗಳಲ್ಲಿ ಮನೆಯವರೇ ಕೆಲಸ ಮಾಡುತ್ತಿದ್ದರು. ನಗುವು, ಮಾತು,ಶ್ರಮ-ಅದೇ ಹಬ್ಬದ ಸೊಗಸು.ಆದರೆ ಇಂದು...ಕೆಲಸಕ್ಕೆ ಹೊರಗಿನವರಿದ್ದಾರೆ,ಮನೆಯವರು ಅತಿಥಿಗಳಂತೆ ಕುಳಿತಿದ್ದಾರೆ.ಒಬ್ಬರೋ ರೀಲ್ಸ್ ಇನ್ನೊಬ್ಬರು ಫೋಟೋ, ಮತ್ತೊಬ್ಬರು ಚಾಟ್ ಹೀಗೆ ಅವರದೇ ಲೋಕದಲ್ಲಿ ತಲ್ಲೀನ. ಭಗವಂತನೋ ಮನಸೊಳಗೆ ಇದ್ದ ಇಳಿಯಲೇ ಇಲ್ಲ ಕಾರಣ ಸ್ಥಳಾವಕಾಶ ನೀಡದ ಹೊರತು…
- ಧೀರಜ್ ಬೆಳ್ಳಾರೆ
ಚಿತ್ರ ಕೃಪೆ: ಇಂಟರ್ನೆಟ್ ತಾಣ
ಪ್ರತಿಕ್ರಿಯೆ (0)
ಇನ್ನೂ ಯಾವುದೇ ಪ್ರತಿಕ್ರಿಯೆಗಳಿಲ್ಲ. ಮೊದಲ ಪ್ರತಿಕ್ರಿಯೆ ಮಾಡಿ!